ಉದಯವಾಹಿನಿ, ಮನಿಲಾ: ಫಿಲಿಪೈನ್ಸ್ ನ ಉತ್ತರದ ಪರ್ವತ ಪ್ರದೇಶದಲ್ಲಿ ಚಂಡಮಾರುತದಿಂದ ಭಾರಿ ಮಳೆ ,ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 25 ಜನರು ಸಾವನ್ನಪ್ಪಿದ್ದಾರೆ. ಈ ಪ್ರದೇಶದ ಹಲವು ಹಳ್ಳಿಗಳಲ್ಲಿನ ಲಕ್ಷಂತರ ಜನರನ್ನು ಸ್ಥಳಾಂತರಿಸಲಾಗಿದೆ. ಪಂಗಾಸಿನನ್‌ ಪ್ರಾಂತ್ಯದ ಆಗ್ನೋ ಪಟ್ಟಣದಲ್ಲಿ ಕಳೆದ ರಾತ್ರಿ120 ನಿಂದ 160 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸಿದ್ದು ಹಲವೆಡೆ ಭೂಕುಸಿತ ಉಂಟುಮಾಡಿದೆ ಚಂಡಮಾರುತವು ಟೈಫೂನ್‌ಆಗಿ ಪರಿವರ್ತನೆಗೊಂಡು ಈಶಾನ್ಯಕ್ಕೆ ಭಾಗಕ್ಕೆ ಮುಂದುವರಿಯುತ್ತಿದ್ದಂತೆ ಇಂದು ಬೆಳಿಗ್ಗೆ 100 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸುತ್ತಿತ್ತು.
ಕೋ-ಮೇನಲ್ಲಿ ಒಂದು ವಾರದಿಂದ ಮಳೆ ತೀವ್ರವಾಗಿ ಸುರಿಯುತ್ತಿದೆ.ವಿಪತ್ತು ಪರಿಹಾರ ಅಧಿಕಾರಿಗಳ ಪ್ರಕಾರ ಹೆಚ್ಚಾಗಿ ಹಠಾತ್‌ ಪ್ರವಾಹ, ಮರಗಳು ಉರುಳುವುದು, ಭೂಕುಸಿತಗಳು ಮತ್ತು ವಿದ್ಯುತ್‌ ಆಘಾತಗಳಿಂದಾಗಿ ಕನಿಷ್ಠ 25 ಸಾವುಗಳ ಸಂಭವಿಸಿದೆ ಇನ್ನೂ ಎಂಟು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.ಸರ್ಕಾರವು ಇಂದು ಮೂರನೇ ದಿನ ಮನಿಲಾದಲ್ಲಿ ಶಾಲೆಗಳನ್ನು ಮುಚ್ಚಿತು ಮತ್ತು ಲುಜಾನ್‌ನ ಮುಖ್ಯ ಉತ್ತರ ಪ್ರದೇಶದ 35 ಪ್ರಾಂತ್ಯಗಳಲ್ಲಿ ತರಗತಿಗಳನ್ನು ಸ್ಥಗಿತಗೊಳಿಸಿತು. ಕನಿಷ್ಠ 77 ಪಟ್ಟಣಗಳು ಮತ್ತು ನಗರಗಳಲ್ಲಿ ವಿಪತ್ತು ಸ್ಥಿತಿಯನ್ನು ಘೋಷಿಸಿವೆ.
ಹವಾಮಾನ ವ್ಯಪರಿತ್ಯದಿಂದ 2.78,000 ಜನರನ್ನು ಸುರಕ್ಷತೆಗಾಗಿ ತಮ ಮನೆಗಳನ್ನು ಬಿಡಲು ಸೂಚಿಸಲಾಗಿದೆ.ಅವರುತುರ್ತು ಆಶ್ರಯ ಅಥವಾ ಸಂಬಂಧಿಕರ ಮನೆಗೆ ತೆಳರಲು ಸಲಹೆ ನೀಡಲಾಗಿದೆ. ಸುಮಾರು 3,000 ಮನೆಗಳು ಹಾನಿಗೊಳಗಾಗಿವೆ ಎಂದು ಸರ್ಕಾರದ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.ಉತ್ತರ ಪ್ರಾಂತ್ಯಗಳಲ್ಲಿ ಸಮುದ್ರ ಮತ್ತು ವಾಯು ಪ್ರಯಾಣವನ್ನು ನಿರ್ಬಂಧಿಸಲಾಗಿದೆ.ಪ್ರವಾಹದಲ್ಲಿ ಸಿಲುಕಿರುವ ಅಥವಾ ಭೂಕುಸಿತಗಳು, ಮರಗಳು ಮತ್ತು ಬಂಡೆಗಳಿಂದ ರಸ್ತೆಗಳು ಹಾಳಾಗಿರುವುಇದರಿಂದ ಹಳ್ಳಿಗಳಲ್ಲಿ ಜನರನ್ನು ರಕ್ಷಿಸಲು ಸಾವಿರಾರು ಸೇನಾ ಪಡೆಗಳು, ಪೊಲೀಸರು, ಕರಾವಳಿ ಕಾವಲು ಪಡೆ ಸಿಬ್ಬಂದಿ, ಅಗ್ನಿಶಾಮಕ ದಳ ಮತ್ತು ನಾಗರಿಕ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಅಮೆರಿಕದಿಂದ ವಾಪಸ್ಸಾದ ಅಧ್ಯಕ್ಷ ಫರ್ಡಿನಾಂಡ್‌ ಮಾರ್ಕೋಸ್‌‍ ಜೂನಿಯರ್‌ ರಿಜಾಲ್‌ ಪ್ರಾಂತ್ಯದ ತುರ್ತು ಆಶ್ರಯಗಳಿಗೆ ಭೇಟಿ ನೀಡಿ ಸ್ಥಳಾಂತರಗೊಂಡ ನಿವಾಸಿಗಳಿಗೆ ಆಹಾರ ಪ್ಯಾಕ್‌ಗಳನ್ನು ವಿತರಿಸಲು ಸಹಾಯ ಮಾಡಿದರು.ನಂತರ ಅವರು ವಿಪತ್ತು-ಪ್ರತಿಕ್ರಿಯೆ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ನಡೆಸಿದರು.

Leave a Reply

Your email address will not be published. Required fields are marked *

error: Content is protected !!