ಉದಯವಾಹಿನಿ , ಬೀಜಿಂಗ್: ಚೀನಿ ಭೌತಶಾಸ್ತ್ರಜ್ಞ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತ ಚೆನ್ ನಿಂಗ್ ಯಾಂಗ್ ಬೀಚಿಂಗ್‌ನಲ್ಲಿ 103ನೇ ವಯಸ್ಸಿನಲ್ಲಿ ನಿಧನರಾದರು. 1922ರಲ್ಲಿ ಚೆನ್ ನಿಂಗ್ ಯಾಂಗ್ ಪೂರ್ವ ಚೀನಾ(China)ದ ಅನ್‌ಹುಯಿ ಪ್ರಾಂತ್ಯದ ಹೆಫೆಯಿಯಲ್ಲಿ ಜನಿಸಿದರು. 1940ರ ದಶಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ (America)ಕ್ಕೆ ತೆರಳಿದ ಅವರು, ನಂತರ ಅಲ್ಲಿಯೇ ಹಲವು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಭೌತಶಾಸ್ತ್ರಕ್ಕೆ ಚೆನ್ ನಿಂಗ್ ಯಾಂಗ್ ನೀಡಿದ ಕೊಡುಗೆಗಳನ್ನು ಗುರುತಿಸಿ 1957ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಚೀನಾದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.
