ಉದಯವಾಹಿನಿ, ದೆಹಲಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ ಮತ್ತು ಆಪರೇಷನ್ ಸಿಂದೂರದಂತಹ ಕಾರ್ಯಾಚರಣೆಯ ಮೂಲಕ ಭಯೋತ್ಪಾದನೆಯ ವಿರುದ್ಧ ತನ್ನ ಶೂನ್ಯ ಸಹಿಷ್ಣುತಾ ನೀತಿಯನ್ನು ವಿಶ್ವದ ಮುಂದೆ ಗಮನಾರ್ಹ ರೀತಿಯಲ್ಲಿ ಪುನರುಚ್ಚರಿಸಿದೆ ಎಂದು ಶನಿವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿ ಎಂಟನೇ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು. ಆಪರೇಷನ್‌ ಸಿಂದೂರದಲ್ಲಿ ಭಾಗವಹಿಸಿದ್ದ ಸಶಸ್ತ್ರ ಪಡೆಗಳು ಮತ್ತು ಬಿಎಸ್ಎಫ್ ಯೋಧರಿಗೆ ಅಮಿತ್‌ ಶಾ ವಂದನೆಗಳನ್ನು ಸಲ್ಲಿಸಿದ್ದಾರೆ.

ದೇಶದ ಆರ್ಥಿಕತೆ ಕುರಿತು ಮಾತನಾಡಿದ ಗೃಹ ಸಚಿವ ಭಾರತದ ಆರ್ಥಿಕತೆಯು ಜಾಗತಿಕವಾಗಿ ನಾಲ್ಕನೇ ಸ್ಥಾನಕ್ಕೆ ಏರಿದೆ ಎಂದು ಹೇಳಿದ್ದಾರೆ. ಭಾರತವು ಈಗ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ನವೋದ್ಯಮಗಳು, ಹಸಿರು ಶಕ್ತಿ ಮತ್ತು ಆವಿಷ್ಕಾರಗಳಲ್ಲಿ ವಿಶ್ವ ನಾಯಕನಾಗಿದೆ. ಭಾರತದ ಹೆಚ್ಚುತ್ತಿರುವ ಸ್ಥಾನಮಾನವು ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು, ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಏಕರೂಪದ ತಂಡಗಳನ್ನು ರಚಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ. ರತದ ಹೆಚ್ಚುತ್ತಿರುವ ಸ್ಥಾನಮಾನವು ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರಲ್ಲದೇ, ಅವುಗಳನ್ನು ನಿಭಾಯಿಸಲು ಉತ್ತಮ ಸಮನ್ವಯಕ್ಕೆ ಕರೆ ನೀಡಿದ್ದಾರೆ.

ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು, ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಏಕರೂಪದ ತಂಡಗಳನ್ನು ರಚಿಸಬೇಕೆಂದು ಅವರು ನಿರ್ದೇಶಿಸಿದರು. ನ್ಯಾಟ್‌ಗ್ರಿಡ್, ನಿಡಾನ್, ಐಎಂಒಟಿ ಮತ್ತು ಸಿಬಿಐನ ಫ್ಯೂಜಿಟಿವ್ ಡೇಟಾಬೇಸ್‌ನಂತಹ ರಾಷ್ಟ್ರೀಯ ಡೇಟಾಬೇಸ್‌ಗಳನ್ನು ತರಬೇತಿ ಕಾರ್ಯಕ್ರಮಗಳಲ್ಲಿ ಸೇರಿಸುವ ಮೂಲಕ ಅವುಗಳನ್ನು ಬಳಸಲು ಯುವ ಅಧಿಕಾರಿಗಳನ್ನು ಪ್ರೋತ್ಸಾಹಿಸಬೇಕೆಂದು ಅಮಿತ್‌ ಶಾ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!