ಉದಯವಾಹಿನಿ, ನವದೆಹಲಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿ 26 ಪ್ರವಾಸಿಗರನ್ನು ಕೊಂದಿದ್ದ ಉಗ್ರರು ಪಾಕಿಸ್ತಾನದವರಲ್ಲ. ಪಾಕಿಸ್ತಾನದಿಂದ ಬಂದಿರೋದಕ್ಕೆ ಯಾವುದೇ ಆಧಾರ ಇಲ್ಲ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿಕೆ ನೀಡಿದ್ದಾರೆ. ವೆಬ್‍ಸೈಟ್‍ವೊಂದಕ್ಕೆ ನೀಡಿರುವ ಸಂದರ್ಶನಲ್ಲಿ, ಇಷ್ಟು ವಾರಗಳ ಕಾಲ ಎನ್‍ಐಎ ಏನು ತನಿಖೆ ಮಾಡಿದೆ ಎಂದು ಬಹಿರಂಗಪಡಿಸುತ್ತಿಲ್ಲ. ಉಗ್ರರನ್ನು ಪತ್ತೆ ಹಚ್ಚಿದ್ದಾರಾ? ಉಗ್ರರು ಎಲ್ಲಿಂದ ಬಂದಿದ್ದಾರೆ ಅನ್ನೋದು ಪತ್ತೆಯಾಗಿದೆಯಾ? ನಮ್ಮ ಪ್ರಕಾರ ಅವರು ಸ್ವದೇಶಿ ಉಗ್ರರು. ಉಗ್ರರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಏಕೆ ಊಹೆ ಮಾಡಿಕೊಳ್ತಿದ್ದಾರೆ? ಅವರು ಪಾಕಿಸ್ತಾನದಿಂದ ಬಂದಿರೋದಕ್ಕೆ ಯಾವುದೇ ಆಧಾರವಿಲ್ಲ ಎಂದು ಪಾಕಿಸ್ಥಾನಕ್ಕೆ ಚಿದಂಬರಂ ಕ್ಲೀನ್‍ಚಿಟ್ ಕೊಟ್ಟಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಮ್ಮ ಸೇನೆಗೆ ಆದ ಹಾನಿಯನ್ನೂ ಕೇಂದ್ರ ಸರ್ಕಾರ ಬಚ್ಚಿಡುತ್ತಿದೆ. 2ನೇ ವಿಶ್ವಯುದ್ಧದ ವೇಳೆ ಅಮೆರಿಕದ ಚರ್ಚಿಲ್, ಇಂಗ್ಲೆಂಡ್ ಕೂಡ ತನಗಾದ ನಷ್ಟದ ಬಗ್ಗೆ ನಿತ್ಯ ಹೇಳಿಕೆ ನೀಡುತ್ತಿದ್ದವು. ಯುದ್ಧ ಎಂದ ಮೇಲೆ ಹಾನಿ ಸಹಜ. ಅದನ್ನು ಒಪ್ಪಿಕೊಳ್ಳೋದು ಬಿಟ್ಟು ಮುಚ್ಚಿಡೋದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಚಿದಂಬರಂ ಹೇಳಿಕೆಗೆ ತಿರುಗೇಟು ಕೊಟ್ಟಿದ್ದು, ಕಾಂಗ್ರೆಸ್ ಯಾವಾಗಲೂ `ಶತ್ರುವಿನ ರಕ್ಷಣೆಗೆ ತಲೆಬಾಗಿ’ ನಿಂತಿರುತ್ತೆ.`ಕೇಸರಿ ಭಯೋತ್ಪಾದನೆ’ ಸಿದ್ಧಾಂತದ ಪ್ರತಿಪಾದಕ ಪಿ ಚಿದಂಬರಂ ಮತ್ತೊಮ್ಮೆ ತಮ್ಮನ್ನು ತಾವು ವೈಭವದಿಂದ ಪ್ರಸ್ತುತಪಡಿಸಿಕೊಂಡಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!