ಉದಯವಾಹಿನಿ,ಬೆಂಗಳೂರು: ನೀವು ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಿಯು ಸೇರಿದಂತೆ ಇತರೆ ಕೋರ್ಸ್ ಗಳಲ್ಲಿ ಉತ್ತೀರ್ಣರಾಗಿದ್ದರೇ, 35 ಸಾವಿರದವರೆಗೆ ಬಹುಮಾನದ ಹಣ ಪಡೆಯಲು ಸರ್ಕಾರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2023-24 ಸಾಲಿಗೆ ಸಾಗರ ಸಮಾಜ ಕಲ್ಯಾಣ ಇಲಾಖೆಯು ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದಿದೆ. ಪಿ.ಯು.ಸಿ ಮತ್ತು 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸ್‍ಗಳಿಗೆ ರೂ.20,000/-, ಪದವಿ ರೂ.25,000/- , ಸ್ನಾತಕೋತ್ತರ ಪದವಿ ಪದವಿ ರೂ.30,000/- ಹಾಗೂ ಕೃಷಿ/ ಇಂಜಿನಿಯರಿಂಗ್/ ವೈದ್ಯಕೀಯ/ ಪಶುವೈದ್ಯಕೀಯ ರೂ.35,000/- ಗಳನ್ನು ಪಡೆಯಲು ಸಮಾಜ ಕಲ್ಯಾಣ ಇಲಾಖೆ ವೆಬ್‍ಸೈಟ್ www.tw.kar.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಯನ್ನು ಕಚೇರಿಗೆ ಸಲ್ಲಿಸುವಂತೆ ತಿಳಿಸಿದೆ. ಸೋ ಹಾಗಿದ್ದರೇ ಇನ್ನೂ ಯಾಕೆ ತಡ, ನೀವು ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಗಳಲ್ಲಿ ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೇ ಅರ್ಜಿ ಸಲ್ಲಿಸಿ, ಬಹುಮಾನದ ಹಣವನ್ನು ಪಡೆಯಿರಿ.
