ಉದಯವಾಹಿನಿ,ನವದೆಹಲಿ: ಇಂದು ಭಾರತೀಯ ಷೇರು ಮಾರುಕಟ್ಟೆಗೆ ಅತ್ಯಂತ ಐತಿಹಾಸಿಕ ದಿನವಾಗಿದ್ದು, ಬಿಎಸ್‌ಇ ಸೆನ್ಸೆಕ್ಸ್ ಇಂದು ತನ್ನ ಹಳೆಯ ದಾಖಲೆಯನ್ನ ಮುರಿಯುವಲ್ಲಿ ಯಶಸ್ವಿಯಾಗಿದೆ. ಸೆನ್ಸೆಕ್ಸ್ ಇಂದು 63,588 ಅಂಕಗಳ ಮಟ್ಟವನ್ನ ತಲುಪಿದ್ದು, ಇದು ಇಲ್ಲಿಯವರೆಗಿನ ಗರಿಷ್ಠ ಮಟ್ಟವಾಗಿದೆ. ನಿಫ್ಟಿಯೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 18,887 ದಾಟಿದ್ದು, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಬಿಎಸ್ ಇ ಸೆನ್ಸೆಕ್ಸ್ 196 ಅಂಕಗಳ ಜಿಗಿತದೊಂದಿಗೆ 63,523 ಅಂಕಗಳಲ್ಲಿ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 40 ಅಂಕಗಳ ಜಿಗಿತದೊಂದಿಗೆ 18,856 ಅಂಕಗಳಲ್ಲಿ ಮುಕ್ತಾಯಗೊಂಡಿತು.
