ಉದಯವಾಹಿನಿ, ನವದೆಹಲಿ: ರಷ್ಯಾದಲ್ಲಿ ಭೂಕಂಪ , ಜಪಾನಿನಲ್ಲಿ (Japan) ಸುನಾಮಿ (Tsunami). 2025ರಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳ (Natural disaster) ಬಗ್ಗೆ ಹಲವು ದಶಕಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಜಪಾನ್‌ನ ಬಾಬಾ ವಂಗಾ (Baba Vanga Prediction) ಎಂದೂ ಕರೆಯಲ್ಪಡುವ ರಿಯೋ ತತ್ಸುಕಿ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಬಾಬಾ ವಂಗಾ ಅವರ ಭವಿಷ್ಯವಾಣಿ ನಿಜವಾಗಿದೆ. ಬಾಬಾ ವಂಗಾ ಅವರ ಈ ವರ್ಷದ ವಿಪತ್ತಿನ ಬಗ್ಗೆ ಕೆಲವು ವಾರಗಳ ಹಿಂದೆಯಷ್ಟೇ ಕೆಲವರು ಎಚ್ಚರಿಕೆ ನೀಡಿದ್ದರು. ಇದೀಗ ಜಪಾನ್‌ನ ಕೆಲವು ಭಾಗಗಳಲ್ಲಿ ಭೂಕಂಪ, ಸುನಾಮಿ ಕಾಣಿಸಿಕೊಂಡಿದ್ದು, ಮತ್ತೆ ಎಲ್ಲರೂ ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ಪರಿಶೀಲಿಸುವಂತೆ ಮಾಡಿದೆ.

ರಷ್ಯಾದ ಭೂಕಂಪದ ಸುದ್ದಿ ಹರಡುತ್ತಿದ್ದಂತೆ ಎಲ್ಲರೂ 1999ರ ಮೊದಲು ಪ್ರಕಟವಾದ ಬಾಬಾ ವಂಗಾ ಅವರ ಭವಿಷ್ಯವಾಣಿ ಕಡೆ ನೋಡುವಂತೆ ಮಾಡಿದೆ. ಯಾಕೆಂದರೆ ಬಾಬಾ ವಂಗಾ ಅವರು ಈ ಹಿಂದಿನ ವಿಪತ್ತುಗಳನ್ನು ನಿಖರವಾಗಿ ಊಹಿಸಿದ್ದರು ಎನ್ನಲಾಗಿದೆ. ಇದರಲ್ಲಿ ರಾಜಕುಮಾರಿ ಡಯಾನಾ ಮತ್ತು ಫ್ರೆಡ್ಡಿ ಮರ್ಕ್ಯುರಿಯ ಸಾವು, ಕೋವಿಡ್ -19 ಸಾಂಕ್ರಾಮಿಕ, 2011 ರ ಭೂಕಂಪ ಮತ್ತು ಸುನಾಮಿಯಂತಹ ಘಟನೆಗಳು ಸೇರಿವೆ.

ರಿಯೋ ತತ್ಸುಕಿ ಅವರು 2025ರ ಜುಲೈ ನಲ್ಲಿ ಸಂಭವಿಸಬಹುದಾದ ವಿಪತ್ತುಗಳ ಬಗ್ಗೆಯೂ ಊಹಿಸಿದ್ದರು. ಇದರಂತೆ ಜುಲೈ 5 ರಂದು ಏನಾದರೂ ದೊಡ್ಡ ಘಟನೆ ನಡೆಯಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಆ ದಿನ ಏನೂ ನಡೆಯಲಿಲ್ಲ. ಹೀಗಾಗಿ ಇದೊಂದು ವದಂತಿ ಎಂದುಕೊಂಡವರಿಗೆ ಜುಲೈ ತಿಂಗಳಾಂತ್ಯ ಬಹುದೊಡ್ಡ ಆಘಾತವನ್ನು ನೀಡಿದೆ. ಭೂಕಂಪ ಮತ್ತು ಅದರ ಪರಿಣಾಮವಾಗಿ ಸುನಾಮಿ ಕಾಣಿಸಿಕೊಂಡಿದ್ದು, ಮತ್ತೆ ವಂಗಾ ಅವರ ಕುರಿತು ಚರ್ಚೆ ಪ್ರಾರಂಭಿಸಿದೆ.

Leave a Reply

Your email address will not be published. Required fields are marked *

error: Content is protected !!