ಉದಯವಾಹಿನಿ, ಕೊಪ್ಪಳ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು, ಸುಟ್ಟು ಹಾಕಿದ ಬಳಿಕ ನಾಗರ ಪಂಚಮಿ ಹಬ್ಬ ಮಾಡಿದ್ದ ವಿಲಕ್ಷಣ ಘಟನೆಯೊಂದು ಕೊಪ್ಪಳ ತಾಲೂಕಿನ ಬುದಗೂಂಪದಲ್ಲಿ ನಡೆದಿದೆ.ದ್ಯಾಮಣ್ಣ ವಜ್ರಬಂಡಿ (38) ಕೊಲೆಯಾದ ಪತಿ, ನೇತ್ರಾವತಿ ಚಟ್ಟಕಟ್ಟಿದ ಪತ್ನಿ. ತನ್ನ ಪ್ರಿಯಕರ ಶಾಮಣ್ಣ ಜೊತೆ ಸೇರಿಕೊಂಡು ಪತಿಯನ್ನ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕೊಲೆ ನಡೆದಿದ್ದು ಹೇಗೆ?
ಪತ್ನಿ ನೇತ್ರಾವತಿ ಜುಲೈ 25ರಂದು ಪ್ರೀಯಕರ ಶ್ಯಾಮಣ್ಣ ಜೊತೆ ಸೇರಿಕೊಂಡು ಗಂಡನನ್ನ ಕೊಲೆ ಮಾಡಿದ್ದಳು. ತಮ್ಮ ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು ಹಾಕಿದ್ದಳು. ಶ್ಯಾಮಣ್ಣ ಜೊತೆ ಸೇರಿಕೊಂಡು ಪೆಟ್ರೋಲ್ ಸುರಿದು ಶವ ಸುಟ್ಟಿದ್ದರು.
ಪರಸಂಗಕ್ಕೆ ಅಡ್ಡಿಯಾದ ಪತಿಗೆ ಚಟ್ಟ: ಆರೋಪಿ ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ. ಅದೇ ಗ್ರಾಮದ ನೇತ್ರಾವತಿಯನ್ನ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ನೇತ್ರಾವತಿ ಹಾಗೂ ಶ್ಯಾಮಣ್ಣ ನಡುವೆ ಅಕ್ರಮ ಸಂಭಂದ ಇತ್ತು. ಶ್ಯಾಮಣ್ಣನಿಗೆ ಮೂರು ಮಕ್ಕಳಿದ್ದರೂ ಇಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು. ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.
