ಉದಯವಾಹಿನಿ, ಸಾಮಾನ್ಯವಾಗಿ ಆಮ್ಲ ಅಥವಾ ಭಾರತೀಯ ಭಾಷೆಯಲ್ಲಿ ನೆಲ್ಲಿಕಾಯಿ ಎಂದು ಕರೆಯಲ್ಪಡುವ ಅಮಲಕಿ, ಭಾರತೀಯ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳಲ್ಲಿ ಅತ್ಯಂತ ಮೌಲ್ಯಯುತ ಉತ್ಪನ್ನಗಳಲ್ಲಿ ಒಂದಾಗಿದೆ. ಸುಲಭವಾಗಿ ಲಭ್ಯವಿರುವ, ಕೈಗೆಟುಕುವ ದರದಲ್ಲಿ ದೊರಕುವ ಈ ನೆಲ್ಲಿಕಾಯಿ ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಆಯುರ್ವೇದದಲ್ಲಿ ತ್ರಿಫಲ ಎಂದು, ಅಮಲಕಿ ಎಂದು ಜನಪ್ರಿಯವಾಗಿದೆ.
ಆಯುರ್ವೇದದಲ್ಲಿ ಅಮಲಕಿಯ ಹಲವು ಪ್ರಯೋಜನಗಳನ್ನು ವಿವರಿಸಿದ್ದಾರೆ. ಇದು ಮುಖ್ಯವಾಗಿ ರಸಾಯನ ಗುಣ ಹೊಂದಿದೆ ಹಾಗೂ ಇದನ್ನು ಅಮೃತಕ್ಕೆ ಹೋಲಿಸಿದ್ದಾರೆ. ಅಮಲಕಿಯು ಆಯುರ್ವೇದದಲ್ಲಿ ಒಂದು ಮುಖ್ಯ ಔಷಧವಾಗಿದ್ದು, ನಿತ್ಯ ಸೇವಿಸಬಹುದಾದ ಆಹಾರವಾಗಿದೆ. ದಿನನಿತ್ಯದ ಬಳಕೆಯಲ್ಲಿ ಅಮಲಕಿಯನ್ನು ಹಲವು ವಿಧವಾಗಿ ಸೇವಿಸಬಹುದು.
ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ 1 ಅಥವಾ 2 ನೆಲ್ಲಿಕಾಯಿಯನ್ನು ಸೇವಿಸಬಹುದು.
ಒಂದೂವರೆ ಚಮಚ ನೆಲ್ಲಿಕಾಯಿ ಪುಡಿಯನ್ನು ಬಿಸಿ ನೀರು ಅಥವಾ ಜೇನುತುಪ್ಪದ ಜೊತೆ ಸೇವಿಸಬಹುದು.
ನೆಲ್ಲಿಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ರಿಂದ 20 ಮಿ.ಲೀ. ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಬಹುದು.
ಒಣಗಿಸಿದ ನೆಲ್ಲಿಕಾಯಿಯನ್ನು ನೀರಿನಲ್ಲಿ ಕುದಿಸಿ ಕಷಾಯದ ರೂಪದಲ್ಲಿ ಕುಡಿಯಬಹುದು.
ಅಮಲಕಿ (ನೆಲ್ಲಿಕಾಯಿ) ಆಯುರ್ವೇದದಲ್ಲಿ ರಸಾಯನವೆಂದು ಪರಿಗಣಿಸಲ್ಪಟ್ಟಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಅಮಲಕಿಯನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುತ್ತದೆ. ಇದು ದೇಹದ ಸಮಗ್ರ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!