ಉದಯವಾಹಿನಿ, ಚಾಮರಾಜನಗರ: ಸರ್ಕಾರಿ ಕಛೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಸೇರಿದಂತೆ ಇನ್ನಿತರ ಖಾಸಗಿತ್ವದ ಕಾರ್ಯಕ್ರಮಗಳನ್ನ ಆಯೋಜಿಸುವುದನ್ನ ನಿಷೇಧಿಸಲಾಗಿದ್ದರೂ ಸಹ ಜಿಲ್ಲೆಯ ವಿವಿದೆಡೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೆಚ್ಚಾಗಿದೆ. ಗುಂಡ್ಲುಪೇಟೆ ಪಟ್ಟಣದ ಸಾಮಾಜಿಕ ಅರಣ್ಯ ಕಛೇರಿಯಲ್ಲಿಯೂ ಈ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಗುಂಡ್ಲುಪೇಟೆ ಅರಣ್ಯ ವಲಯ ಕಚೇರಿಯಲ್ಲಿ ಆಗಿಂದಾಗ್ಗೆ ಹುಟ್ಟುಹಬ್ಬ ಆಚರಣೆ ಕಚೇರಿಯಲ್ಲಿ ಮಾಡಲಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಕಛೇರಿಯಲ್ಲಿ ನೌಕರನೊಬ್ಬನ ಹುಟ್ಟು ಹಬ್ಬ ಆಚರಣೆ ಮಾಡಲಾಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಮೇಲಾಧಿಕಾರಿಗಳು ಕೆಸಿಎಸ್‌ಆರ್ ನಿಯಮದ ಪ್ರಕಾರ ಕ್ರಮ ಕೈಗೊಳ್ಳುವರೊ ಅಥವಾ ಅವರು ಮೌನವಾಗಿರುವರೊ ಕಾದು ನೋಡಬೇಕಾಗಿದೆ.
