ಉದಯವಾಹಿನಿ, ಕಳೆದ ಕೆಲವು ವರ್ಷಗಳಿಂದ ಹೃದಯಾಘಾತ ಸೇರಿದಂತೆ ಹೃದಯಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಯಸ್ಸಿನ ಹಂಗಿಲ್ಲದೆ ಸಣ್ಣ ಮಕ್ಕಳು, ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಎದೆಭಾಗದಲ್ಲಿ ನೋವು ಇಲ್ಲವಾದರೆ ಹಿಡಿದುಕೊಂಡಂತಹ ಅನುಭವವಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಆದರೆ ಹೃದಯದ ಆರೋಗ್ಯ ತಪಾಸಣೆಗೆಂದು ಹೋದಾಗ ವೈದ್ಯರು ಮೊದಲು ಹೇಳುವ ಪರೀಕ್ಷೆಯೇ ಇಸಿಜಿ. ಆದರೆ ಹೃದ್ರೋಗ ತಜ್ಞರು ಹೇಳುವ ಪ್ರಕಾರ ಹೃದಯದ ಆರೋಗ್ಯ ಹೇಗಿದೆ ಎಂದು ತಿಳಿಯಲು ಇನ್ನು ಎರಡು ಪರೀಕ್ಷೆಗಳಿವೆಯಂತೆ.

ಹೃದಯದ ಆರೋಗ್ಯ ತಪಾಸಣಾ ಪರೀಕ್ಷೆಗಳು: ಹೃದಯದ ಆರೋಗ್ಯದ ಸ್ಥಿತಿ ಹೇಗಿದೆ ಎಂದು ತಿಳಿಯಲು ಇಸಿಜಿ ಜೊತೆಗೆ ಇನ್ನೆರಡು ಪರೀಕ್ಷೆಗಳಿವೆ. ಈ ಎರಡು ಪರೀಕ್ಷೆಗಳನ್ನು ಮಾಡಿಸಿದರೆ ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎನ್ನುವ ಸ್ಪಷ್ಟ ಚಿತ್ರಣವು ಸಿಗುತ್ತದೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇಸಿಜಿ ನಿಮ್ಮ ಹೃದಯದ ಸ್ಥಿತಿಯ ಬಗ್ಗೆ ಕೇವಲ 20-30 ಪ್ರತಿಶತದಷ್ಟು ಮಾಹಿತಿಯನ್ನು ನೀಡುತ್ತದೆ. ಆದರೆ ಟಿಎಂಟಿ ಹಾಗೂ ಇಸಿಒ ಕಾರ್ಡಿಯೋಗ್ರಫಿ ಈ ಎರಡು ಪ್ರಬಲವಾದ ಪರೀಕ್ಷೆಗಳಿವೆ ಎಂದು ವಿವರಿಸಿದ್ದಾರೆ.

ಟಿಎಂಟಿ: ರೋಗಿಯ ಹೃದಯದ ಸ್ಥಿತಿ ತಿಳಿಯಲು ಸಹಾಯಕ: ಟಿಎಂಟಿ (ಟ್ರೆಡ್ ಮಿಲ್ ಪರೀಕ್ಷೆ) ಯನ್ನು ಇಸಿಜಿ ಜೊತೆಗೆ ಮಾಡಲಾಗುತ್ತದೆ. ಇದು ಓಡಾಡುವ ಯಂತ್ರದ ಮೂಲಕ ಈ ಪರೀಕ್ಷೆಯನ್ನು ಮಾಡಿಸುತ್ತಾರೆ. ಟಿಎಂಟಿ ಯಂತ್ರದ ಮೇಲೆ ರೋಗಿಯೂ ನಿಂತ ಕೂಡಲೇ ವೈದ್ಯರು ಅದರ ವೇಗ ಹಾಗೂ ಬಲವನ್ನು ಹೆಚ್ಚಿಸುತ್ತಾರೆ. ಈ ವೇಳೆಯಲ್ಲಿ ರೋಗಿಯ ಹೃದಯ ಸ್ಥಿತಿಯನ್ನು ತಿಳಿಯಬಹುದಾಗಿದೆ. ಈ ನೈಜ ಸಮಯದ ಇಸಿಜಿಯನ್ನು ದಾಖಲಿಸುತ್ತಾರೆ. ಈ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡರೆ ಅಥವಾ ಇಸಿಜಿಯಲ್ಲಿ ಕೆಲವು ಬದಲಾವಣೆಗಳಿದ್ದರೆ ಅದು ಹೃದಯದ ಆರೋಗ್ಯ ಸಮಸ್ಯೆಯಿದೆ ಎಂದು ಸೂಚಿಸುತ್ತದೆ ಎಂದು ಇಲ್ಲಿ ಹೇಳಿದ್ದಾರೆ. ಟಿಎಂಟಿ ಪರೀಕ್ಷೆಯ ಉದ್ದೇಶವು ಒತ್ತಡದ ಸಮಯದಲ್ಲಿ ನಿಮ್ಮ ಹೃದಯ ಸ್ನಾಯುಗಳು ಆಮ್ಲಜನಕವನ್ನು ಪಡೆಯುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು. ಈ ಪರೀಕ್ಷೆಯ ವೇಳೆಯಲ್ಲಿ ಎದೆ ನೋವನ್ನು ಮೌಲ್ಯಮಾಪನ ಮಾಡುವುದಾಗಿದೆ. ಈ ಒತ್ತಡದ ಸಮಯದಲ್ಲಿ ರಕ್ತದೊತ್ತಡ ಹಾಗೂ ಹೃದಯ ಬಡಿತವನ್ನು ದಾಖಲಿಸಲಾಗುತ್ತದೆ. ಇದರಲ್ಲಿ ಏನಾದ್ರು ವ್ಯತ್ಯಾಸ ಕಂಡು ಬಂದರೆ ಹ್ಸೃದಯ ಸಂಬಂಧಿ ಸಮಸ್ಯೆಯಿದೆ ಎಂದರ್ಥ.

Leave a Reply

Your email address will not be published. Required fields are marked *

error: Content is protected !!