ಉದಯವಾಹಿನಿ, 2025ರಲ್ಲಿ ಸಾಂಪ್ರದಾಯಿಕ ಹಬ್ಬದ ಭಕ್ಷ್ಯಗಳು, ವಿಶಿಷ್ಟ ಪಾನೀಯಗಳು ಕುರಿತು ಜನರು ಗೂಗಲ್ ತುಂಬಾ ಹುಡುಕಾಟ ನಡೆಸಿದ್ದಾರೆ. ಭಾರತ ದೇಶವು ರುಚಿಯ ವಿಷಯದಲ್ಲಿ ಎಷ್ಟು ವೇಗವಾಗಿ ಬದಲಾಗುತ್ತಿದೆ. ದೇಶಾದ್ಯಂತ ಹುಡುಕಲಾದ 10 ಅತ್ಯಂತ ರುಚಿಕರ ಹಾಗೂ ವಿಶಿಷ್ಟ ಭಕ್ಷ್ಯಗಳ ಪಟ್ಟಿಯನ್ನು ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಈ ವರ್ಷದಲ್ಲಿ ಹೆಚ್ಚು ಹುಡುಕಾಟ ನಡೆಸಿದ ಟ್ರೆಂಡಿಂಗ್ನಲ್ಲಿರುವ ರುಚಿಕರ ವೈವಿಧ್ಯಮಯ ರೆಸಿಪಿಗಳ ಕುರಿತು ಗೂಗಲ್ ಬಹಿರಂಗಪಡಿಸಿದೆ. ನೆಚ್ಚಿನ ಕಾಕ್‌ಟೇಲ್‌ಗಳಿಂದ ಹಿಡಿದು ಬ್ರಿಟಿಷ್ ಕ್ಲಾಸಿಕ್‌ಗಳವರೆಗೆ ಹೋಲಿಸಿದರೆ, ಭಾರತೀಯ ರೆಸಿಪಿಗಳು ಎಂದಿಗಿಂತಲೂ ಹೆಚ್ಚು ಆಧುನಿಕವಾಗಿವೆ ಎಂದು ಈ ಪಟ್ಟಿಯಿಂದ ತಿಳಿದಿದೆ.
ಈ ಗೂಗಲ್ನ ಪಟ್ಟಿಯಲ್ಲಿ ಪ್ರಾದೇಶಿಕ ಭಕ್ಷ್ಯಗಳು, ಆರೋಗ್ಯಕರ ಪಾನೀಯಗಳು, ಅಂತಾರಾಷ್ಟ್ರೀಯ ಭಕ್ಷ್ಯಗಳು, ಯಾರ್ಕ್‌ಷೈರ್ ಪುಡಿಂಗ್‌ನಂತಹ ಕ್ಲಾಸಿಕ್ ಬ್ರಿಟಿಷ್ ಭಕ್ಷ್ಯಗಳು, ಪೋರ್ನ್‌ಸ್ಟಾರ್ ಮಾರ್ಟಿನಿಯಂತಹ ಕಾಕ್‌ಟೇಲ್‌ಗಳು ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಮೋದಕಗಳು ಇದರಲ್ಲಿ ಇರುವುದು ವಿಶೇಷವಾಗಿದೆ.
ಟೇಸ್ಟಿ ಇಡ್ಲಿ: ದಕ್ಷಿಣ ಭಾರತದ ತಿಂಡಿಗಳಲ್ಲಿ ಪ್ರಧಾನವಾಗಿ ಇಡ್ಲಿಯು ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಇಡ್ಲಿಯ ಸಾಂಪ್ರದಾಯಿಕ ರೂಪದ ಜೊತೆಗೆ ಎಲ್ಲಾ ಬಗೆಯ ಇಡ್ಲಿಗಳ ಹುಡುಕಾಟ ನಡೆಸಲಾಗಿದೆ. ಇದರಲ್ಲಿ ರಾಗಿ ಇಡ್ಲಿ, ಸ್ಟಫ್ಡ್ ಇಡ್ಲಿ, ಇಡ್ಲಿ ಸ್ಯಾಂಡ್‌ವಿಚ್‌ಗಳಂತಹ ಹೊಸ ವಿಧದ ರೆಸಿಪಿಗಳ ಕುರಿತು ಹುಡುಕಾಟ ನಡೆಸಿರುವುದು ದಕ್ಷಿಣ ಭಾರತೀಯ ಖಾದ್ಯವು ಮತ್ತೆ ಹೊಸ ರೂಪಡೆಯುತ್ತಿದೆ. ಇಡ್ಲಿಯು ಆರೋಗ್ಯಕರ ಹಾಗೂ ರುಚಿಕರವಾದ ರೆಸಿಪಿಯಾಗಿದೆ.
ಪೋರ್ನ್‌ಸ್ಟಾರ್ ಮಾರ್ಟಿನಿ: ಹೆಸರು ಆಶ್ಚರ್ಯಕರವೆನಿಸಬಹುದು, ಆದರೆ ಈ ಪಾನೀಯವು 2025ರಲ್ಲಿ ವೈರಲ್ ಆಗಿದೆ. ಪ್ಯಾಶನ್ ಫ್ರೂಟ್, ವೆನಿಲ್ಲಾ ವೋಡ್ಕಾ ಮತ್ತು ಪ್ರೊಸೆಕೊದಿಂದ ತಯಾರಿಸಿದ ಈ ಕಾಕ್‌ಟೈಲ್ ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಪಾಪ್ ಸಂಸ್ಕೃತಿಯಲ್ಲಿ ಕಾಣಿಸಿಕೊಂಡ ಬಳಿಕ ಭಾರತದಲ್ಲಿ ಇದರಲ್ಲಿ ಬಗ್ಗೆ ಅಧಿಕವಾಗಿ ಹುಡುಕಾಟ ನಡೆಸಲಾಗಿದೆ.
