
ಉದಯವಾಹಿನಿ, ಬೆಂಗಳೂರು: ಆವತ್ತು ಸೈಕಲ್ಲು, ಇವತ್ತು ಸ್ಕೂಟರು. ಡಿಸಿಎಂ ಡಿಕೆಶಿ ವಿಧಾನಸೌಧದಲ್ಲಿ ಸೈಕಲ್ ತುಳಿದು ಗಮನ ಸೆಳೆದಿದ್ದರು. ಇಂದು ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಸ್ಕೂಟರ್ ಓಡಿಸಿ ಗಮನ ಸೆಳೆದರು. ಹೆಬ್ಬಾಳ ಬಳಿ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ಬಳಿಕ ಹೊಸ ಫ್ಲೈಓವರ್ ಮೇಲೆಯೇ ಡಿಕೆಶಿ ಸ್ಕೂಟರ್ ರೈಡ್ ಮಾಡಿ ಖುಷಿ ಪಟ್ಟರು. ಡಿಕೆಶಿಯವರು ಈ ವೇಳೆ ಕಾರ್ಯಕರ್ತರೊಬ್ಬರ ಡಿಯೋ ಸ್ಕೂಟರ್ ಅನ್ನು ತಾವೇ ಓಡಿಸಿಕೊಂಡು ಹೊಸ ಫ್ಲೈಓವರ್ ಮೇಲೆ ಒಂದು ರೌಂಡ್ ಹೋಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಡಿಕೆಶಿ ಹಿಂದೆಯೇ ಶಾಸಕ ಎನ್‌ಎ ಹ್ಯಾರೀಸ್ ಕೂಡಾ ಸ್ಕೂಟರ್‌ನಲ್ಲಿ ರೌಂಡ್ ಹೊಡೆದರು. ಡಿಕೆಶಿ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸಿದ್ರೆ, ಹೆಲ್ಮೆಟ್ ಹಾಕದೇ ಹ್ಯಾರಿಸ್ ಗಾಡಿ ಓಡಿಸಿದರು.
