ಉದಯವಾಹಿನಿ, ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಗುರುವಾರದಿಂದ ನಗರದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ನಾಳೆ (ಗುರುವಾರ) ಬೆಳಿಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ 218ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಪ್ರದರ್ಶನ ಸಂಪೂರ್ಣವಾಗಿ ಕಿತ್ತೂರು ರಾಣಿ ಚೆನ್ನಮ್ಮನ ಆಸ್ಥಾನದ ಪರಿಕಲ್ಪನೆಯಲ್ಲಿ ಆಯೋಜನೆಯಾಗಲಿದೆ.
ಆಂಧ್ರಪ್ರದೇಶ, ತಮಿಳುನಾಡು, ಪುಣೆ, ಕೇರಳದಿಂದ ಹೂವುಗಳಿಂದ ತರಿಸಲಾಗಿದ್ದು, 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರು ಕೋಟೆ, ಕಿತ್ತೂರು ರಾಣಿ ಚೆನ್ನಮ್ಮನವರ ಐಕ್ಯ ಮಂಟಪಗಳು ಸಿದ್ಧಗೊಳ್ಳುತ್ತಿವೆ. 600ಕ್ಕೂ ಹೆಚ್ಚು ಕಾರ್ಮಿಕರು, ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಭರ್ಜರಿಯಿಂದ ತಯಾರಿ ನಡೆಯುತ್ತಿದೆ.
ಇನ್ನೂ ಪ್ರದರ್ಶನದಲ್ಲಿ ಹೈಡ್ರಾಂಜಿ, ಕ್ಯಾಲಲಿಲಿ, ಆರ್ಕಿಟ್ಸ್, ಟ್ಯೂಬ್ರೆಟ್ಸ್ ಬೆಗೆನಿಯಾ ಸೇರಿದಂತೆ 105ಕ್ಕೂ ವಿಶೇಷವಾದ ವಾರ್ಷಿಕ ಹೂವುಗಳ ಬಳಕೆ ಮಾಡಲಾಗಿದೆ. ಆ.7ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.

Leave a Reply

Your email address will not be published. Required fields are marked *

error: Content is protected !!