ಉದಯವಾಹಿನಿ, ಬೆಂಗಳೂರು: ಇನ್ಮುಂದೆ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50,000 ರೂಪಾಯಿ ಸಹಾಯಧನ ಕೊಡ್ತೇವೆ ಅಂತ ಸಚಿವ ಜಮೀರ್ ಅಹ್ಮದ್ ತಿಳಿಸಿದರು.ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ಕೊಡುತ್ತೇವೆ. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು, ಅದು ಆದೇಶ ಆಗಿದೆ ಎಂದು ಹೇಳಿದರು.
ಮುಂದುವರಿದು.. ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್ ಸೇರಿದಂತೆ ಪ್ರತಿಭಾನ್ವಿತರಿಗೆ ಸಹಾಯ ಮಾಡುತ್ತೇವೆ. ಇಲಾಖೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿದ್ದೇವೆ. 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್ ಟಾಪ್ ಕೊಡುತ್ತಿದ್ದೇನೆ. ಸಾಮೂಹಿಕ ವಿವಾಹ ಮಾಡವುದು ಬಡವರು, ಹೀಗಾಗಿ ಅಲ್ಪಸಂಖ್ಯಾತರಲ್ಲಿ ಸಾಮೂಹಿಕ ವಿವಾಹ ಮಾಡುವವರಿಗೂ ಸಹಾಯ ಮಾಡುತ್ತೇವೆ ಎಂದು ತಿಳಿಸಿ ಸಹಾಯ ಮಾಡುತ್ತೇವೆಂದು ಮಾಹಿತಿ ನೀಡಿದರು.
ಮದರಸಾದಿಂದ 200 ಜನರ ಆಯ್ಕೆ: ಇನ್ನೂ ಮದರಸಾಗಳಲ್ಲಿ ಕನ್ನಡ ಕಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ವಿಗಳಿಗೂ ಕನ್ನಡ ಬೋಧನೆಯನ್ನ ಮಾಡಲಾಗುವುದು. ಮದರಸಾಗಳಿಂದ 200 ಜನರನ್ನ ಆಯ್ಕೆ ಮಾಡಿದ್ದೇವೆ. 3 ತಿಂಗಳ ಒಳಗೆ ಅವರಿಗೆ ಕನ್ನಡ ಕಲಿಸುತ್ತೇವೆ. ಕನ್ನಡ ರಾಜ್ಯ ನಮ್ಮದು ಕನ್ನಡ ಬರಬೇಕು, ಎಲ್ಲ ಮಸೀದಿ ಗುರುಗಳಿಗೂ ಕನ್ನಡ ಕಲಿಸುತ್ತೇವೆ ಎಂದು ತಿಳಿಸಿದರು.
