ಉದಯವಾಹಿನಿ, ನವದೆಹಲಿ: ಆಪರೇಷನ್ ಸಿಂಧೂರದ ವೇಳೆಯೇ ಭಾರತದ ಮೇಲೆ ದಾಳಿ ಮಾಡುವಂತೆ ಪಾಕ್ ಸೇನಾ ಮುಖ್ಯಸ್ಥ ಆಸೀಮ್ ಮುನೀರ್‌ಗೆ
ಅಲ್-ಖೈದಾ ಭಯೋತ್ಪಾದಕಿ ಬೆಂಗಳೂರಿನಿಂದಲೇ ಮನವಿ ಮಾಡಿರುವ ಎಟಿಎಸ್ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಅಲ್-ಖೈದಾ ಭಯೋತ್ಪಾದಕಿ ಶಮಾ ಪರ್ವೀನ್ ಅನ್ಸಾರಿ 2 ಫೇಸ್‌ಬುಕ್ ಹಾಗೂ 1 ಇನ್ಸಾ÷್ಟಗ್ರಾಂ ಖಾತೆಯನ್ನು ಹೊಂದಿದ್ದಳು. ಭಾರತದ ಮೇಲೆ ದಾಳಿ ಮಾಡುವಂತೆ ಅಲ್ಲದೇ ಇಲ್ಲಿನ ಮುಸ್ಲಿಂ ಪ್ರದೇಶಗಳನ್ನು ಏಕೀಕರಣಗೊಳಿಸುವಂತೆ ಸೋಶಿಯಲ್ ಮೀಡಿಯಾದ ಮೂಲಕವೇ ಆಸೀಮ್ ಮುನೀರ್‌ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ವಿಚಾರವು ಗುಜರಾತ್ ಎಟಿಎಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಸೀಮ್ ಮುನೀರ್ ಫೋಟೋ ಹಾಕಿ ಭಾರತದ ಮುಸ್ಲಿಂ ಪ್ರದೇಶಗಳನ್ನು ಏಕೀಕರಣಗೊಳಿಸಲು ಇದು ಉತ್ತಮ ಅವಕಾಶ. ಭಾರತದ ಮೇಲೆ ದಾಳಿ ನಡೆಸಿ, ಹಿಂದುತ್ವ ಹಾಗೂ ಯಹೂದಿ ನಿರ್ಮೂಲನೆ ಮಾಡಲು ಖಿಲಾಫತ್ ಸ್ವೀಕರಿಸುವಂತೆ ಬರೆದುಕೊಂಡಿದ್ದಳು.
