ಉದಯವಾಹಿನಿ, ಅನಿವಾರ್ಯತೆ ಮನುಷ್ಯನನ್ನು ಯಾವ ಪರಿಸ್ಥಿತಿಗೂ ತಳ್ಳುತ್ತದೆ ಹಾಗೂ ಅದೃಷ್ಟ ಕೈ ಹಿಡಿದರೆ ಅದೇ ಮನುಷ್ಯನ ಬದುಕನ್ನೇ ಬದಲಿಸಬಹುದು ಎಂಬುದು . ಆದರೆ, ಈ ವಿಡಿಯೊ ನೋಡಿದ್ರೆ ಪ್ರೀತಿ ಮತ್ತು ಸಹಾನುಭೂತಿಯಿಂದ ಮಾನವೀಯತೆ ಇನ್ನೂ ಉಳಿದಿದೆ ಎಂದೆನಿಸುತ್ತದೆ. ಮೊಣಕಾಲುಗಳ ನೋವಿದ್ದರೂ ತನ್ನ ಕಾಯಕವನ್ನು ಮರೆಯದ ವೃದ್ಧ ವ್ಯಕ್ತಿಯೊಬ್ಬರು ತನಗೆ ಆರ್ಡರ್ ಬಂದ ಆಹಾರವನ್ನು ವಿತರಿಸಿದ್ದಾರೆ. ಇದನ್ನು ನೋಡಿದ ಮಹಿಳೆಯೊಬ್ಬರು ಆ ವ್ಯಕ್ತಿಗೆ 22,000 ಡಾಲರ್ ಮೊತ್ತವನ್ನು ನೀಡಿ ಸಹಾನುಭೂತಿ ತೋರಿದ್ದಾರೆ.

ವೃದ್ಧರೊಬ್ಬರು ಆಹಾರ ತಲುಪಿಸಲು ಮೊಣಕಾಲು ನೋವಿದ್ದರೂ ಮೆಟ್ಟಿಲು ಹತ್ತಿ ಬಂದು ಡೋರ್ ಬೆಲ್ ರಿಂಗಣಿಸಿದ್ದಾರೆ. ಮಹಿಳೆ ಆ ವ್ಯಕ್ತಿಯನ್ನು ಗಮನಿಸಿ ಸಹಾನುಭೂತಿ ತೋರಿದ್ದಾರೆ. ಮೂಲತಃ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಇದೀಗ ಇನ್‌ಸ್ಟಾಗ್ರಾಮ್‌ನಲ್ಲೂ ಹರಿದಾಡುತ್ತಿದೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಆ ವ್ಯಕ್ತಿಯ ಕಥೆಯನ್ನು ಹಂಚಿಕೊಂಡ ಫ್ಲೋರಿಡಾ ಮಹಿಳೆ ಐರ್ಲೆಂಡ್ ಡ್ಯಾನೆಹೋಲ್ಡ್ ಅವರು ವೃದ್ಧ ವ್ಯಕ್ತಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಇದಕ್ಕಾಗಿ ಅವರು ದೇಣಿಗೆ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದರು. ಹಾಗೆಯೇ ಅವರಿಗಾಗಿ ದೊಡ್ಡ ಮೊತ್ತವನ್ನು ಸಂಗ್ರಹಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಡೆಲಿವರಿ ಮ್ಯಾನ್ ಆಗಿರುವ ವೃದ್ಧ ವ್ಯಕ್ತಿಯ ವಿಡಿಯೊ ಪೋಸ್ಟ್ ಆದ ಬಳಿಕ ಅವರ ಜೀವನ ಸಂಪೂರ್ಣ ಬದಲಾಯಿತು. ಬೈಲಿ ಎಂದು ಹೆಸರಿಸಲಾದ ಡೆಲಿವರಿ ಮ್ಯಾನ್, ಫ್ಲೋರಿಡಾದಲ್ಲಿ ವಾಸಿಸುವ ಯುವತಿ ಐರ್ಲೆಂಡ್ ಡ್ಯಾನೆಹೋಲ್ಡ್‌ಗೆ ಆಹಾರವನ್ನು ತಲುಪಿಸಲು ಮೂರು ಮೆಟ್ಟಿಲುಗಳನ್ನು ಹತ್ತಿದ್ದಾರೆ. ಮೊಣಕಾಲುಗಳ ನೋವಿದ್ದರೂ ತನ್ನ ಕಾಯಕ ಮರೆಯದಿರುವುದು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಸಂತಸ ತಂದಿದೆ.

Leave a Reply

Your email address will not be published. Required fields are marked *

error: Content is protected !!