ಉದಯವಾಹಿನಿ, ಬೀಜಿಂಗ್: ವ್ಯಕ್ತಿಯೊಬ್ಬ ಮಕ್ಕಳನ್ನು ಶಾಲೆಗೆ ಬಿಡಲು ಮರೆತಿದ್ದಾನೆ. ಪರಿಣಾಮ ಕೋಪಗೊಂಡ ಆತನ ಪತ್ನಿ ಅವನನ್ನು ಒದ್ದಿದ್ದಾಳೆ. ಒದ್ದ ರಭಸಕ್ಕೆ ಆತ ನೇರವಾಗಿ ಕೊಳಕ್ಕೆ ಬಿದ್ದಿದ್ದಾನೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರಿಗೆ ನಗು ತರಿಸಿದೆ. ಚೀನಾದಲ್ಲಿ ವ್ಯಕ್ತಿಯೊಬ್ಬ ಮಕ್ಕಳನ್ನು ಶಾಲೆಗೆ ಬಿಡಲು ಮರೆತಿದ್ದಕ್ಕಾಗಿ ಗರ್ಭಿಣಿ ಪತ್ನಿ ಅವನನ್ನು ಮೀನಿನ ಕೊಳಕ್ಕೆ ಒದ್ದಿದ್ದಾಳೆ. ಹಲವಾರು ಬಾರಿ ನೆನಪಿಸಿದರೂ, ಅವನು ಅವಳ ಸೂಚನೆಗಳನ್ನು ನಿರ್ಲಕ್ಷಿಸಿ ಮೀನುಗಳಿಗೆ ಆಹಾರ ನೀಡುತ್ತಲೇ ಇದ್ದನು.

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಆ ವ್ಯಕ್ತಿ ಕೊಳದ ಬಳಿ ಕುಳಿತಿರುವುದನ್ನು ಕಾಣಬಹುದು. ಏನಾಗಲಿದೆ ಎಂಬುದರ ಅರಿವಿಲ್ಲದೆ ಮೀನುಗಳಿಗೆ ಆಹಾರ ಹಾಕುತ್ತಾ ಕುಳಿತಿದ್ದಾನೆ. ಕೆಲವು ಕ್ಷಣಗಳ ನಂತರ, ಅವನ ಹೆಂಡತಿ ಹಿಂದಿನಿಂದ ಬಂದು ಒದ್ದಿದ್ದಾಳೆ. ಆಕೆ ಒದ್ದ ರಭಸಕ್ಕೆ ಪತಿರಾಯ ನೇರವಾಗಿ ಕೊಳಕ್ಕೆ ಬಿದ್ದಿದ್ದಾನೆ.

“ತಾನು ನೀರಿನಿಂದ ಮೇಲೆ ಎದ್ದೆ. ನನಗೆ ಯಾವುದೇ ಗಾಯವಾಗಲಿಲ್ಲ. ನಾನು ನೀರಿನಿಂದ ಮೇಲೆ ಬಂದ ನಂತರ, ನನ್ನ ಹೆಂಡತಿಗೆ ಕ್ಷಮೆಯಾಚಿಸಿದೆ. ಅವಳು ಒಳ್ಳೆಯಳೇ, ಆದರೆ ಅವಳು ಗರ್ಭಿಣಿಯಾಗಿರುವುದರಿಂದ ಕೆಲವೊಮ್ಮೆ ಆಕೆಗೆ ಬೇಗನೆ ಕೋಪ ಬರುತ್ತದೆ. ಅವಳು ಕೂಡ ಕ್ಷಮೆಯಾಚಿಸಿದಳು” ಎಂದು ಶ್ರೀಡು ಎಂದು ಗುರುತಿಸಲ್ಪಟ್ಟ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡನು.

Leave a Reply

Your email address will not be published. Required fields are marked *

error: Content is protected !!