ಉದಯವಾಹಿನಿ, ಲಖನೌ: ಜನರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಾರೆ. ಆದರೆ, ಬ್ಯಾಂಕ್‍ನಲ್ಲಿದ್ದವರೇ ಕಳ್ಳರಾದರೇ ಏನು ಮಾಡುವುದು? ಉತ್ತರ ಪ್ರದೇಶದ ಮಹೋಬಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇದರ ವಿಡಿಯೊ ವೈರಲ್ ಆಗಿದೆ. ಈ ಘಟನೆಯು ಗ್ರಾಹಕರ ಹಣದ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಮಹೋಬಾದ ಜಿಲ್ಲಾ ಸಹಕಾರಿ ಬ್ಯಾಂಕಿನ ಕ್ಯಾಶಿಯರ್ ಒಬ್ಬ ಗ್ರಾಹಕರ ನೋಟುಗಳನ್ನು ಕದ್ದು, ನಂತರ ಆ ಬಂಡಲ್‌ನಲ್ಲಿ ಕಡಿಮೆ ನೋಟುಗಳಿವೆ ಎಂದು ಹೇಳಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಕ್ಯಾಷಿಯರ್ ಪಕ್ಕಕ್ಕೆ ಸರಿದು ಕೆಲವು ಕರೆನ್ಸಿ ನೋಟುಗಳನ್ನು ಮರೆಮಾಡಿ ಉಳಿದ ನೋಟುಗಳನ್ನು ನಗದು ಎಣಿಸುವ ಯಂತ್ರಕ್ಕೆ ಹಾಕುವುದನ್ನು ದೃಶ್ಯದಲ್ಲಿ ತೋರಿಸಲಾಗಿದೆ.ಕ್ಯಾಷಿಯರ್ ಅನ್ನು ಮೋಹಿತ್ ಖರೆ ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಮೋಹಿತ್‍ನನ್ನು ವಜಾಗೊಳಿಸಲು ಶಿಫಾರಸು ಮಾಡುವ ವರದಿಯನ್ನು ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತಿದೆ. ಘಟನೆ ಯಾವಾಗ ನಡೆಯಿತು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ.ಭಾರತದ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಈ ರೋಹಿಂಗ್ಯಾಗಳು ಮ್ಯಾನ್ಮಾರ್ ನಿವಾಸಿಗಳಾಗಿದ್ದು, ಅಲ್ಲಿನ ಸೇನೆಯ ದಬ್ಬಾಳಿಕೆಯನ್ನು ಎದುರಿಸಿದ ನಂತರ ಬಾಂಗ್ಲಾದೇಶ, ಭಾರತ ಮತ್ತು ಇತರ ಹಲವು ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ, ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ರೋಹಿಂಗ್ಯಾ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. 19 ಬಾರಿ ಇರಿದು ಹತ್ಯೆ ಮಾಡಲಾಯಿತು. ಮಾಹಿತಿಯ ಪ್ರಕಾರ, ಈ ಕೊಲೆಯ ಅಪರಾಧಿಯೂ ರೋಹಿಂಗ್ಯಾನೇ ಆಗಿದ್ದಾನೆ ಎನ್ನಲಾಗಿದೆ.
