ಉದಯವಾಹಿನಿ,ಕಾಸರಗೋಡು: ಕಾಸರಗೋಡು ಅಡೂರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕಿಯ ನೇಮಕ ಮಾಡಿದ್ದು, ಇದು ಅಲ್ಲಿನ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಇನ್ನೂ ಕೇರಳ ಸರ್ಕಾರದ ಈ ನಿರ್ಧಾರದ ಬಗ್ಗೆ ಅಲ್ಲಿ ಕನ್ನಡ ವಿದ್ಯಾರ್ಥಿಗಳು ಕಿಡಿಕಾರಿದ್ದು, ಬೋರ್ಡ್ ಹಿಡಿದುಕೊಂಡು ನಮಗೆ ಕನ್ನಡ ಶಿಕ್ಷಕರು ಬೇಕು ಅಂತ ಪ್ರತಿಭಟನೆ ನಡೆಸಿದ್ದಾರೆ ಕೂಡ. ಇದೇ ವೇಳೇ ಕರ್ನಾಟಕ ರಾಜ್ಯ ಸರ್ಕಾರವು ಕೂಡ ಈ ಬಗ್ಗೆ ಅಲ್ಲಿ ಅಡಳಿತ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದು, ಈ ಕೂಡಲೇ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ. ಕೇರಳ ಸಚಿವ ಶಿವನ್ ಕುಟ್ಟಿಗೆ ಸಚಿವ ಶಿವರಾಜ್ ತಂಗಡಗಿ ಪತ್ರ ಬರೆದಿದ್ದಾರೆ, ಆದರೆ ಇದಾವುಕ್ಕೂ ಕೂಡ ಅಲ್ಲಿನ ಸಚಿವರು ಕ್ಯಾರೆ ಎನ್ನದೇ ಇರುವುದು ಬೇಸರದ ಸಂಗತಿಯಾಗಿದೆ. ಇನ್ನೂ ಕೇರಳ ಸರ್ಕಾರದ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಾತೃ ಭಾಷೆಯಲ್ಲಿ ನಮಗೆ ಪಾಠ ಮಾಡುವವರು ಬೇಕಾಗಿದ್ದಾರೆ ಅಂತ ಮನವಿ ಮಾಡಿದ್ದಾರೆ.
