ಉದಯವಾಹಿನಿ, ಕೊರಟಗೆರೆ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ನಾನಾ ಕಡೆಗಳಿಂದ ಇಂದು ಮುಂಜಾನೆಯಿಂದಲೇ ಶ್ರೀ ಮಹಾಲಕ್ಷ್ಮೀಯ ದರ್ಶನ ಪಡೆದು ಧನ್ಯತಾಭಾವದಲ್ಲಿ ಸಾಗುತ್ತಿದ್ದುದು ಕಂಡುಬಂತು.ಕಲ್ಪತರು ನಾಡು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಇಂದು ಬೆಳಗಿನ ಜಾವದಿಂದಲೂ ವಿಶೇಷ ಪೂಜೆ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಮಾತೆಯ ದರ್ಶನ ಪಡೆದರು.ಶ್ರಾವಣ ಮಾಸದ 2 ನೇ ಶುಕ್ರವಾರ ಪೌರ್ಣಿಮೆಗೆ ಬಹಳ ಪ್ರಾಶಸ್ತ್ಯ ಹೊಂದಿರುವ ಹಬ್ಬವಾದ ವರ ಮಹಾಲಕ್ಷ್ಮೀ ಹಬ್ಬ ಸಕಲ ಸಂಪತ್ತುಗಳಿಗೆ ಮೂಲವಾಗಿಯೂ ಸಕಲ ಆರೋಗ್ಯ ಭಾಗ್ಯ ಸುಖದಾಯಕವಾಗಿ ಇರುವ ಪವನಕರ ಹಬ್ಬ. ಹೆಣ್ಣು ಮಕ್ಕಳಿಗೂ ಸೌಭಾಗ್ಯ ನೀಡುವ ಪುಣ್ಯಕರ ವ್ರತವಾಗಿ ಆಚರಿಸುವ ವರ ಮಹಾಲಕ್ಷ್ಮಿ ಹಬ್ಬದಂದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿಯಾಗಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಿಶೇಷವಾಗಿ ವರ್ಷದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಸೇರಿದಂತೆ ಭಾನುವಾರ ಸರ್ಕಾರಿ ರಜಾ ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ವಿವಿಧ ನಾನಾ ಅಲಂಕಾರದೊಂದಿಗೆ ವಿಶೇಷ ಪೂಜೆ, ವ್ರತ, ಹೋಮಗಳನ್ನು ಏರ್ಪಡಿಸಲಾಗುತ್ತದೆ. ಬರುವ ಭಕ್ತಾದಿಗಳಿಗೆ ಮೂಲಸೌಕರ್ಯದೊಂದಿಗೆ ದಾಸೋಹ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನೀಡಲಾಗಿದೆ ಎಂದು ಅಧ್ಯಕ್ಷ ವಾಸುದೇವ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!