ಉದಯವಾಹಿನಿ, ಬಾಗಲಕೋಟೆ: ಸಹಪಾಠಿಗಳು ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ.ಗುಳೇದಗುಡ್ಡ ಪಟ್ಟಣದ ಖಾಸಗಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಂಜಲಿ ಮುಂಡಾಸ (21) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಕಾಲೇಜಿನಲ್ಲಿ ಸಹಪಾಠಿಗಳಾದ ವರ್ಷಾ ಹಾಗೂ ಪ್ರದೀಪ್ ಸೇರಿ ಅಂಜಲಿಗೆ ರ‍್ಯಾಗಿಂಗ್ ಮಾಡಿದ್ದರು. ಇದರಿಂದ ಮಾನಸಿಕ ಕಿರುಕುಳ ಅನುಭವಿಸಿದ್ದ ಅಂಜಲಿ, ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ವರ್ಷಾ ಜಮ್ಮನಕಟ್ಟಿ ಹಾಗೂ ಪ್ರದೀಪ್ ಅಳಗುಂದಿ ಇನ್ನಿತರರ ಮೇಲೆ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡೆತ್‌ನೋಟ್‌ನಲ್ಲೇನಿದೆ?
ನನ್ನ ಸಾವಿಗೆ ಕಾರಣ ಈ ಮೂವರು ವ್ಯಕ್ತಿಗಳು. ನನ್ನ ಬದುಕಿನಲ್ಲಿ ಅವರು ಪರಿಣಾಮವನ್ನು ಬೀರಿದ್ದಾರೆ. ಅವರುಗಳೆಂದರೆ ವರ್ಷಾ, ಪ್ರದೀಪ್ ಮತ್ತು ಇನ್ನಿತರ ಸ್ನೇಹಿತರು. ನನ್ನ ಬಗ್ಗೆಯೇ ಮಾತನಾಡಿ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ. ಅವರು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು. ಸೇಯಿಂಗ್ ಗುಡ್ ಬೈ ಎಂದು ಸಹಿ ಹಾಕಿ ಅಂಜಲಿ ಡೆತ್‌ನೋಟ್ ಬರೆದಿದ್ದಾಳೆ.

Leave a Reply

Your email address will not be published. Required fields are marked *

error: Content is protected !!