ಉದಯವಾಹಿನಿ, ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಅಭಿಮಾನಿಗಳ ವಿರೋಧದ ನಡುವೆಯೇ ಗುರುವಾರ ರಾತ್ರೋರಾತ್ರಿ ತೆರವು ಮಾಡಲಾಗಿತ್ತು. ಈ ಕುರಿತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಪ್ರತಿಕ್ರಿಯೆ ನೀಡಿ, ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಇತ್ತು ಎಂಬುದು ನಮಗೆ ಗೊತ್ತಿರಲಿಲ್ಲ. ನಾವು ಅಲ್ಲೇ ಹೋಗಿ ಸಂಸ್ಕಾರ ಮಾಡಬೇಕು ಅಂದುಕೊಂಡಿದ್ದೆವು. ಕುಮಾರಸ್ವಾಮಿ ಅವರು ಹೇಳಿದ್ರು ದೇವೇಗೌಡರು ಹೇಳಿದ್ದಾರೆ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಇದೆ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಮಾಡಿ ಎಂದಿದ್ರು. ಹಾಗಾಗಿ ನಾವು ಒಪ್ಪಿಕೊಂಡಿದ್ದೆವು ಎಂದು ಹೇಳಿದ್ದಾರೆ.
ದಯವಿಟ್ಟು ಅಭಿಮಾನಿಗಳು ದೂರ ಆಗಬೇಡಿ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕ ಮಾಡಿ. ಅಭಿಮಾನಿಗಳ ಪ್ರಯತ್ನದಿಂದ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು.
