ಉದಯವಾಹಿನಿ, ರಾಯಚೂರು: ಮಂತ್ರಾಲಯದಲ್ಲಿ ಗುರುರಾಯರ 354ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆಮಾಡಿದೆ. ಆರಾಧನಾ ಮಹೋತ್ಸವದ ಎರಡನೇ ದಿನವಾದ ಇಂದು ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ ಭಕ್ತಿ ಸಡಗರದಿಂದ ನಡೆದಿವೆ. ರಾಯರ ವೃಂದಾವನ ಮುಂದಿನ ಎರಡು ಶಿಲಾ ಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಅಳವಡಿಸಲಾಗಿದೆ. ಗುರು ರಾಯರ ಭಕ್ತರ ದೇಣಿಗೆಯಿಂದ ತಯಾರಿಸಿದ ಕವಚಗಳು ಮೊದಲ ಬಾರಿಗೆ ಅಳವಡಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ತಿರುಪತಿ ತಿರುಮಲ ದೇವಾಲಯದಿಂದ ಶ್ರೀನಿವಾಸ ದೇವರ ಶೇಷವಸ್ತ್ರ ಮಂತ್ರಾಲಯಕ್ಕೆ ಬಂದಿದ್ದು, ಮಠದ ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿದೆ.
