ಉದಯವಾಹಿನಿ,ಸಿದ್ದಾಪುರ: ಮಳೆಗಾಲ ಪ್ರಾರಂಭವಾದರೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಮಾಮೂಲಿ ಎಂಬಂತಾಗಿದ್ದು, ಕೊಂಬೆ ಬಿದ್ದು ಹಾಳಾಗುವ ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸುವುದು ಸೆಸ್ಕ್ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸುತ್ತದೆ. ಈ ಸಂದರ್ಭ ಹಲವಾರು ಗ್ರಾಮಗಳು ನಾಲ್ಕೈದು ದಿನಗಳು ಕತ್ತಲೆಯಲ್ಲಿ ಕಳೆಯುವುದು ಸಾಮಾನ್ಯವಾಗಿದೆ. ಸಿದ್ದಾಪುರ ಸೆಂಸ್ಕಾಂ ಕೇಂದ್ರ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಅರಣ್ಯ ಪ್ರದೇಶ ಹಾಗೂ ಖಾಸಗಿ ತೋಟಗಳನ್ನು ಒಳಗೊಂಡಿರುವುದರಿಂದ ಬೃಹದಾಕಾರದ ಮರಗಳ ಕೆಳಗೆ ವಿದ್ಯುತ್ ತಂತಿಗಳು ಹಾದು ಹೋಗುತ್ತಿದ್ದು, ಮಳೆ ಗಾಳಿಗೆ ಮರದ ಕೊಂಬೆ ಅಥವಾ ಮರಗಳು ತಂತಿಯ ಮೇಲೆ ಬೀಳುತ್ತಿರುವುದರಿಂದ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ.
