ಉದಯವಾಹಿನಿ, ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಸಂಸತ್ ಭವನದ ಸಂಕೀರ್ಣದಲ್ಲಿ ಇಂಡಿ ಒಕ್ಕೂಟದ ಸಂಸದರು ‘ಟಿ-ಶರ್ಟ್ ಪ್ರತಿಭಟನೆ’ ನಡೆಸಿದರು. ಪ್ರತಿಭಟನೆ ವೇಳೆ ಟೀ ಶರ್ಟ್ ಮೇಲೆ ಮುದ್ರಿಸಿದ್ದ 124 ವರ್ಷದ ಮತದಾರರು ಎನ್ನಲಾದ ಮಹಿಳೆ ಪ್ರತ್ಯಕ್ಷವಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಆಕೆ ತನ್ನ ನಿಜ ವಯಸ್ಸನ್ನ ಬಹಿರಂಗಪಡಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ತರಾಟೆ ತೆಗೆದುಕೊಂಡಿದ್ದಾರೆ.
ವಿಪಕ್ಷಗಳ ಆಕ್ರೋಶ ಏನು?
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ (Voter List) ಪರಿಷ್ಕರಣೆ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಹಲವು ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಮಕರದ್ವಾರದ ಎದುರು ʻಟೀ ಶರ್ಟ್ʼ ಪ್ರತಿಭಟನೆ ನಡೆಸಿದರು. ಬಿಹಾರದ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ ಎನ್ನಲಾದ 124 ವರ್ಷದ ಮತದಾರೆಯ ಹೆಸರನ್ನು ಬರೆದ ಬಿಳಿ ʻಟಿ ಶರ್ಟ್ʼ ಧರಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಟಿಎಂಸಿಯ ಡೆರಿಕ್ ಒಬ್ರಿಯಾನ್, ಡಿಎಂಕೆಯ ಟಿ.ಆರ್ ಬಾಲು, ಎನ್‌ಸಿಪಿ (SP)ಯ ಸುಪ್ರಿಯಾ ಸುಳೆ ಸೇರಿದಂತೆ ಇಂಡಿ ಒಕ್ಕೂಟದ ಅನೇಕ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
