ಉದಯವಾಹಿನಿ, ಚೀನಾ: ತನ್ನ ಭದ್ರತೆಗೆ ವಿಶೇಷ ಆದ್ಯತೆ ಕೊಡುವ ಚೀನಾ, ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ರಹಸ್ಯವಾಗಿ ಪೊಲೀಸ್‌ ಠಾಣೆಗಳನ್ನು ತೆರೆದಿದೆ ಎಂದು ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿದೆ. ಚೀನಾ ತನ್ನ ನಾಗರಿಕರು ವಿದೇಶದಲ್ಲಿದ್ದುಕೊಂಡು ಕಮ್ಯುನಿಸ್ಟ್ ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದರೆ ಅಂತವರನ್ನು ಹತ್ತಿಕ್ಕಲು ಈ ರೀತಿ ವ್ಯವಸ್ಥೆ ಮಾಡಿಕೊಂಡಿದೆ ಎಂಬ ಆರೋಪವಿದೆ. ಈಗಾಗಲೇ 53ಕ್ಕೂ ಹೆಚ್ಚು ದೇಶಗಳಲ್ಲಿ 102 ಪೊಲೀಸ್‌ ಠಾಣೆಗಳನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ. ಈ ವಿಚಾರ ಮತ್ತೆ ಮತ್ತೆ ಚರ್ಚೆಯಾಗುತ್ತಿದ್ದು, ಮುಂದುವರೆದ ದೇಶಗಳನ್ನು ಚಿಂತೆಗೀಡುಮಾಡಿದೆ.

ನ್ಯೂಯಾರ್ಕ್‌ನಲ್ಲಿ ಸಿಕ್ಕಿಬಿದ್ದ ʻಕಳ್ಳʼ ಪೊಲೀಸರು..!
2022 -2023 ರಲ್ಲಿ ನ್ಯೂಯಾರ್ಕ್‌ನಲ್ಲಿ ಅನಧಿಕೃತವಾಗಿ ಪೊಲೀಸ್‌ ಠಾಣೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಈ ಪೊಲೀಸ್‌ ಠಾಣೆ ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯದ ಶಾಖೆಯಾದ ಫುಝೌ ಮುನ್ಸಿಪಲ್ ಪಬ್ಲಿಕ್ ಸೆಕ್ಯುರಿಟಿ ಬ್ಯೂರೋದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಬಂದಿತ್ತು. ಈ ಪೊಲೀಸ್‌ ಠಾಣೆಗೆ ನ್ಯಾಯಾಲಯ ಮತ್ತು ರಾಜತಾಂತ್ರಿಕ ಅನುಮತಿ ಇರಲಿಲ್ಲ. ಈ ಪ್ರಕರಣ ಗುಪ್ತಚರ ಅಧಿಕಾರಿಗಳನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಪ್ರಕರಣ ಹೊರಗೆ ಬರುತ್ತಿದ್ದಂತೆ ಯುಕೆ, ಜರ್ಮನಿ, ನೆದರ್‌ಲ್ಯಾಂಡ್ಸ್ ಮತ್ತು ಕೆನಡಾದ ಪೊಲೀಸರು ತಮ್ಮ ದೇಶಗಳಲ್ಲಿ ಇದೇ ರೀತಿಯ ಆರೋಪಗಳ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದರು.

Leave a Reply

Your email address will not be published. Required fields are marked *

error: Content is protected !!