ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಹಲವು ಕಡೆ ಹಿಂದೂ ದೇವಾಲಯಗಳು ಧ್ವಂಸಗೊಂಡ ಘಟನೆಗಳು ಬೆಳಕಿಗೆ ಬಂದಿದ್ದವು. ಇದೀಗ ಅಂತಹುದೇ (BAPS ಮತ್ತೊಂದು ಘಟನೆ ಈ ವಾರದ ಆರಂಭದಲ್ಲಿ ಅಮೆರಿಕದ ಇಂಡಿಯಾನಾ ನಗರದಲ್ಲಿ ಹಿಂದೂ ದೇವಾಲಯವನ್ನು ವಿರೂಪಗೊಳಿಸಲಾಗಿದೆ. ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದೆ. ದೇವಾಲಯದ ಮುಖ್ಯ ಸೂಚನಾ ಫಲಕವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ದೇವಾಲಯದ ಪ್ರದೇಶದಲ್ಲಿ ತೊಂದರೆ ನೀಡುವವರ ವಿರುದ್ಧ ಜಾಗರೂಕತೆ ವಹಿಸುವಂತೆ ರಾಯಭಾರಿ ಕಚೇರಿ ತಿಳಿಸಿದೆ.
“ಇಂಡಿಯಾದ ಗ್ರೀನ್‌ವುಡ್‌ನಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದ ಮುಖ್ಯ ಸಂಕೇತ ಫಲಕವನ್ನು ಅಪವಿತ್ರಗೊಳಿಸಿರುವುದು ಖಂಡನೀಯ” ಎಂದು ದೂತವಾಸ ತನ್ನ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ. ತ್ವರಿತ ಕ್ರಮಕ್ಕಾಗಿ” ಕಾನೂನು ಜಾರಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಬರೆಯಲಾಗಿದೆ. ಗ್ರೀನ್‌ವುಡ್ ಮೇಯರ್ ಸೇರಿದಂತೆ ಭಕ್ತರು ಮತ್ತು ಸ್ಥಳೀಯ ನಾಯಕರ ಸಭೆಯನ್ನುದ್ದೇಶಿಸಿ ಕಾನ್ಸುಲ್ ಜನರಲ್ ಅವರು “ಏಕತೆ ಮತ್ತು ಒಗ್ಗಟ್ಟಿಗಾಗಿ ಮತ್ತು ಅಲ್ಲಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಲಿಫೋರ್ನಿಯಾದ ಚಿನೋ ಹಿಲ್ಸ್ ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಗೋಡೆ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆದಿದ್ದರು. ದೇವಾಲಯದ ಗೋಡೆಗಳ ಮೇಲೆ ಕೆಲವು ಭಾರತ ವಿರೋಧಿ ಮತ್ತು ಪ್ರಧಾನಿ ಮೋದಿ ವಿರೋಧಿ ಸಂದೇಶಗಳನ್ನು ಬರೆಯಲಾಗಿತ್ತು. ಇಷ್ಟೇ ಅಲ್ಲ, ದೇವಾಲಯದ ಆವರಣವನ್ನು ಅಪವಿತ್ರಗೊಳಿಸುವ ಪ್ರಯತ್ನವೂ ನಡೆಯಿತು. ಅಮೆರಿಕದಲ್ಲಿ ಭಾರತದ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ಮಧ್ಯೆ ಇದುವರೆಗೆ ದಾಖಲಾದ ನಾಲ್ಕನೇ ಘಟನೆಯಾಗಿದೆ.
