ಉದಯವಾಹಿನಿ,ಬೆಂಗಳೂರು: ಮಹಿಳೆಯರು ಸೌಂದರ್ಯಪ್ರಿಯ ರಾದ್ದರಿಂದ ಮಾರುಕಟ್ಟೆಯಲ್ಲಿರುವ ರಾಸಾಯನಿಕ ಕೆಲವು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ನಾವು ಇಂದು ಅಡುಗೆ ಮನೆಯಲ್ಲಿರುವ ಟೊಮ್ಯಾಟೊ ಬಳಸಿಕೊಂಡು ಹೇಗೆ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂದು ಎಂದು ಹೇಳುತ್ತೇವೆ. ಟೊಮ್ಯಾಟೊನಲ್ಲಿರುವ ಪೋಷಕಾಂಶ: ಟೊಮ್ಯಾಟೊದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಒಳಗೊಂಡಿದೆ. ಇದರಲ್ಲಿ ಫೆನಾಲಿಕ್ ಅಂಶಗಳಾಗಿರುವಂತಹ ಕ್ಯಾರೋಟನಾಯ್ಡ್, ಫಾಲಿಕ್ ಆಮ್ಲ ಮತ್ತು ವಿಟಮಿನ್ ಸಿ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಈ ಕೆಳಗಿನಂತೆ ಚರ್ಮಕ್ಕೆ ಲಾಭ ನೀಡಲಿದೆ.
ಟೊಮ್ಯಾಟೊ ಫೇಸ್ ಪ್ಯಾಕ್:
1) ಟೊಮ್ಯಾಟೊ ಬಳಕೆಯು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಇದು ಚರ್ಮಕ್ಕೆ ಪೋಷಣೆ ನೀಡುತ್ತದೆ. ಚರ್ಮಕ್ಕೆ ಉತ್ತಮ ಹೊಳಪು ನೀಡುತ್ತದೆ.
2) ಟೊಮ್ಯಾಟೊ ರಸವನ್ನು ಮುಖಕ್ಕೆ ಹಚ್ಚಿದರೆ ಬೇಸಿಗೆಯಲ್ಲಿ ತಂಪಾಗುತ್ತದೆ.
3) ಚರ್ಮಕ್ಕೆ ಟೊಮ್ಯಾಟೊ ಬಳಸಿದರೆ ಒಣ ಚರ್ಮವನ್ನು ಮೃದುಗೊಳಿಸುತ್ತದೆ.
4) ಟೊಮ್ಯಾಟೊ ರಸವನ್ನು ಜೇನುತುಪ್ಪದ ಜೊತೆ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿರಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದು ಚರ್ಮವು ಮೃದುವಾಗಿಸುತ್ತದೆ.
5) ಟೊಮ್ಯಾಟೊ ಮತ್ತು ನಿಂಬೆಯ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಟೊಮ್ಯಾಟೊದ ತಿರುಳಿನಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅದನ್ನು ಹೊಳೆಯುವಂತೆ ಮಾಡುತ್ತದೆ.
