ಉದಯವಾಹಿನಿ, ನವದೆಹಲಿ: ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಖ್ಯಾತಿ ಪಡೆದ ಕರ್ನಲ್ ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಗೆ ನೀಡಿದ್ದ ಸೇವೆ ಅಪೂರ್ವ ವಾಗಿದೆ. ಆಪ ರೇಷನ್ ಸಿಂದೂರ್ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ಕಾಲಾವಧಿಯಲ್ಲಿ ಇವರು ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾ ಚರಣೆಯಲ್ಲಿ ಭಾರ ತೀಯ ಸೇನಾ ತುಕಡಿಯನ್ನು ಮುನ್ನಡೆಸಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಜೀವನ ಯುವ ಸಮುದಾಯಕ್ಕೆ ಸ್ಫೂರ್ತಿ ಎನ್ನಬಹುದು.ಅಂತೆಯೇ ಈ ಬಾರಿ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಖ್ಯಾತ ರಿಯಾಲಿಟಿ ಶೋ ಕೋನ್ ಬನೆಗಾ ಕರೋಡ್ ಪತಿಯಲ್ಲಿ (ಕೆಬಿಸಿ) ಕರ್ನಲ್ ಸೋಫಿಯಾ ಖುರೇಷಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ತಮ್ಮ ಪೂರ್ವಜರು ರಾಣಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗಾಗಿ ಹೋರಾಡಿದ್ದಾರೆ ಎಂಬ ಅಪರೂಪದ ಸಂಗತಿಯನ್ನು ಕಾರ್ಯ ಕ್ರಮದಲ್ಲಿ ತಿಳಿಸಿದ್ದು , ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋನಿ ಟಿವಿಯಲ್ಲಿ ಇತ್ತೀಚೆಗಷ್ಟೇ ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಶೋ ಇದರ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಹಾಟ್ ಸೀಟ್‌ನಲ್ಲಿದ್ದ ಕರ್ನಲ್ ಖುರೇಷಿ ಅವರು ಖ್ಯಾತ ಬಾಲಿವುಡ್ ನಟ ಅವರೊಂದಿಗೆ ಸಂಭಾಷಣೆ ಮಾಡುತ್ತಿ ರುವುದನ್ನು ಕಾಣಬಹುದು. ಇವರ ಜೊತೆಗೆ ಇಬ್ಬರು ಅಧಿ ಕಾರಿಗಳು ಕೂಡ ಅಲ್ಲಿದ್ದರು. ಈ ಪ್ರೋಮೊದಲ್ಲಿಯೇ ತಮ್ಮ ಪೂರ್ವಜರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬ ಅಪರೂಪದ ಸಂಗತಿಯನ್ನು ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ನಟ ಅಮಿತಾಬ್ ಬಚ್ಚನ್ ಅವರ ಜೊತೆಗೆ ಕರ್ನಲ್ ಖುರೇಷಿ ಅವರು ಮಾತನಾಡಿ, ನಮ್ಮ ಕುಟುಂಬವು ಕೂಡ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸಿದೆ. ನನ್ನ ಮುತ್ತಜ್ಜಿಯ ಪೂರ್ವಜರು ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಜೊತೆಗೆ ಅವರ ಪರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ನಾನು ಲಾಲಿ ಹಾಡು ಗಳನ್ನು ಕೇಳಿ ಬೆಳೆದವಳಲ್ಲ , ನಾನು ಧೈರ್ಯದ ಕಥೆಗಳನ್ನು ಕೇಳಿದ್ದೇನೆ, ಧೈರ್ಯದ ಅರ್ಥವನ್ನು ಹೇಳುವ ಭಾಷಣಗಳನ್ನು ಕೇಳಿದ್ದೇನೆ ಎಂದು ಅವರು ಹೇಳಿದರು.ಆಪರೇಷನ್ ಸಿಂದೂರ್ ಬಗ್ಗೆ ಕೂಡ ಕರ್ನಲ್ ಖುರೇಷಿ ಅವರು ಮಾಹಿತಿಯನ್ನು ಟಿವಿ ಚಾನೆಲ್ ನಲ್ಲಿ ಹಂಚಿಕೊಂಡಿದ್ದು ಈ ಪ್ರೋಮೊ ವಿಡಿಯೋ ಕೂಡ ವೈರಲ್ ಆಗಿತ್ತು. ಇದರಲ್ಲಿ ಪಾಕಿಸ್ತಾನದ ಗಡಿಯಾಚೆಗೆ ಕ್ರಮ ಕೈಗೊಳ್ಳುವುದು ಏಕೆ ಅಗತ್ಯವಾಯಿತು ಎಂಬುದನ್ನು ಖುರೇಷಿ ವಿವರಿಸಿದ್ದರು. ಪಾಕಿಸ್ತಾನ ನಮ್ಮ ದೇಶದ ಮೇಲೆ ಪದೇ ಪದೇ ದಾಳಿ ಮಾಡುತ್ತಿದೆ, ಆದ್ದರಿಂದ ಪ್ರತಿಕ್ರಿಯಿಸುವುದು ಅಗತ್ಯವಾಗಿತ್ತು. ಅದಕ್ಕಾಗಿಯೇ ಆಪರೇಷನ್ ಸಿಂದೂರ್ ಅನ್ನು ಯೋಜಿಸಲಾಗಿತ್ತು ಎಂದು ಕರ್ನಲ್ ಖುರೇಷಿ ಅವರು ಹೇಳಿದರು.
