ಉದಯವಾಹಿನಿ, ರಾಮನಗರ: ಶ್ರಾವಣ ಶನಿವಾರ ಹಿನ್ನೆಲೆ ರಾಮನಗರದ ರಾಮದೇವರ ಬೆಟ್ಟಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ರಾಮದೇವರ ಬೆಟ್ಟ ಹತ್ತಿ ಪಟ್ಟಾಭಿರಾಮನ ದರ್ಶನ ಪಡೆದು ಶ್ರಾವಣ ಶನಿವಾರದ ವಿಶೇಷ ಪೂಜೆಯಲ್ಲಿ ಪ್ರತಾಪ್ ಸಿಂಹ ಭಾಗಿಯಾಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೊದಲ ಬಾರಿಗೆ ರಾಮದೇವರ ಬೆಟ್ಟಕ್ಕೆ ಬಂದಿದ್ದೇನೆ. ಪ್ರಕೃತಿ ನಡುವೆಯಿರುವ ಪಟ್ಟಾಭಿರಾಮನ ವಿಶೇಷ ದೇವಾಲಯ ಇದು. ಸುಗ್ರೀವ ಈ ದೇವಾಲಯ ನಿರ್ಮಾಣ ಮಾಡಿದ ಇತಿಹಾಸ ಇದೆ. ಇಂದು ಸ್ಥಳೀಯ ಮುಖಂಡರು ಆಹ್ವಾನಿಸಿದ ಹಿನ್ನೆಲೆ ಭೇಟಿ ನೀಡಿದ್ದೇನೆ ಎಂದರು.
ಈ ದೇವಾಲಯ ಮತ್ತಷ್ಟು ಅಭಿವೃದ್ಧಿ ಆಗಬೇಕು, ಮೂಲಭೂತ ಸೌಕರ್ಯಗಳು ಬೇಕು. ಮುಂದೆ 2028ಕ್ಕೆ ಶ್ರೀರಾಮನ ಆಶೀರ್ವಾದದಿಂದ ಬಹುಮತದೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದಮೇಲೆ ಈ ದೇವಾಲಯ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ತಿಳಿಸಿದರು.
