ಉದಯವಾಹಿನಿ, ಬೆಂಗಳೂರು: ನಟ ಅಜಯ್ ರಾವ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ. ಪತ್ನಿ ಸ್ವಪ್ನಾ ಅವರನ್ನು ಮದುವೆಯಾದ ನಂತರ ಅಜಯ್ ರಾವ್ ಶ್ರೀ ಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು.ಪತ್ನಿ ಸ್ವಪ್ನಾ ಅವರು ಸಿನಿಮಾ ನಿರ್ಮಾಣಕ್ಕೆ ಇಳಿಯಬೇಡಿ ಎಂದು ಪದೇ ಪದೇ ಗಂಡನಿಗೆ ಎಚ್ಚರಿಸುತ್ತಿದ್ದರು. ಹೀಗಿದ್ದರೂ ಕೃಷ್ಣಲೀಲಾ, ಯುದ್ಧಕಾಂಡ ಸೇರಿದಂತೆ ಹಲವು ಚಿತ್ರಗಳನ್ನು ಅಜಯ್ ರಾವ್ ನಿರ್ಮಾಣ ಮಾಡಿದ್ದರು.
ಯುದ್ಧಕಾಂಡ ಸಿನಿಮಾಗಾಗಿ ಅಜಯ್ ರಾವ್ ಭಾರೀ ಸಾಲ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಯುದ್ಧಕಾಂಡ ಚಿತ್ರಕ್ಕಾಗಿ ನೆಚ್ಚಿನ ದುಬಾರಿ ಕಾರನ್ನೂ (Car) ಮಾರಾಟ ಮಾಡಿದ್ದರು.ಯುದ್ಧಕಾಂಡ ಬಿಡುಗಡೆಯ ನಂತವೂ ಕೌಟುಂಬದಲ್ಲಿ ಪದೇ ಪದೇ ಕಲಹ ನಡೆಯುತ್ತಿತ್ತು. ವಿಪರೀತ ಸಾಲ ಮಾಡಿಕೊಂಡಿದ್ದೇ ದಾಂಪತ್ಯದಲ್ಲಿ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ. ಕಲಹಕ್ಕೆ ಬೇಸತ್ತು ವಿಚ್ಚೇದನಕ್ಕೆ ಸ್ವಪ್ನಾ ಅರ್ಜಿ ಸಲ್ಲಿಸಿದ್ದಾರೆ.ಯುದ್ಧಕಾಂಡ ಸಿನಿಮಾ ಸಂದರ್ಭದಲ್ಲಿ ಅಜಯ್ ರಾವ್ ತಮ್ಮ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದರು. ಈ ವೇಳೆ ಅವರ ಪುತ್ರಿ ಕಾರನ್ನು ಮಾರಾಟ ಮಾಡಬೇಡಿ ಎಂದು ಹೇಳಿ ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
