ಉದಯವಾಹಿನಿ, ಕೊಹಿಮಾ: ನಾಗಾಲ್ಯಾಂಡ್ ಗವರ್ನರ್ ಲಾ ಗಣೇಶನ್ (80) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆ.8 ರಂದು, ಲಾ ಗಣೇಶನ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಿದ್ದರು. ಈ ವೇಳೆ ಅವರ ತಲೆಗೆ ಗಾಯವಾಗಿತ್ತು. ಅವರಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಅವರು ನಿಧನರಾದರು ಎಂದು ಕೊಹಿಮಾ ರಾಜಭವನದ ಪಿಆರ್‌ಒ ತಿಳಿಸಿದ್ದಾರೆ. ಲಾ ಗಣೇಶನ್ ಅವರನ್ನು 2023ರ ಫೆ.12 ರಂದು ನಾಗಾಲ್ಯಾಂಡ್‌ನ 21ನೇ ಗವರ್ನರ್ ಆಗಿ ನೇಮಿಸಲಾಗಿತ್ತು. ಫೆ.20 ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.
ಲಾ ಗಣೇಶನ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ, ಒಬ್ಬ ಧರ್ಮನಿಷ್ಠ ರಾಷ್ಟ್ರೀಯವಾದಿ ಎಂದು ಗಣೇಶನ್ ಅವರನ್ನು ಸ್ಮರಿಸಲಾಗುತ್ತದೆ. ಅವರು ತಮ್ಮ ಜೀವನವನ್ನು ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರು ತಮಿಳುನಾಡಿನಾದ್ಯಂತ ಬಿಜೆಪಿಯನ್ನು (BJP) ವಿಸ್ತರಿಸಲು ಶ್ರಮಿಸಿದರು. ಅವರು ತಮಿಳು ಸಂಸ್ಕೃತಿಯ ಬಗ್ಗೆಯೂ ತೀವ್ರ ಒಲವು ಹೊಂದಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
