ಉದಯವಾಹಿನಿ, ಬೆಂಗಳೂರು: ಇದು ನನ್ನ ವೈಯಕ್ತಿಕ ವಿಚಾರ. ಇದನ್ನ ನಾವು ಪರಿಹಾರ ಮಾಡಿಕೊಳ್ಳುತ್ತೇವೆ ಎಂದು ನಟ ಅಜಯ್‌ ರಾವ್‌ ಹೇಳಿದ್ದಾರೆ.ನಾವು ಗೌರವಯುತವಾಗಿ ಪರಿಹಾರ ಮಾಡುತ್ತೇವೆ. ಈಗ ನಾನು ಪ್ರತಿಕ್ರಿಯಿಸಿ ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗುವುದು ಬೇಡ. ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ತಿಳಿಸಿದ್ದಾರೆ.ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವ ಪತ್ನಿ ಸ್ವಪ್ನಾ ರಾವ್ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ ಇಬ್ಬರು 2014 ರ ಡಿಸೆಂಬರ್‌ನಲ್ಲಿ ಪ್ರೇಮ ವಿವಾಹವಾಗಿದ್ದರು.

ಕುಟುಂಬಸ್ಥರ ಸಮ್ಮುಖದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಇದ್ದು ಇಬ್ಬರು ಅನ್ಯೋನ್ಯವಾಗಿದ್ದರು.ಇತ್ತೀಚಿಗೆ ದಂಪತಿ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಯುದ್ಧಕಾಂಡ ಸಿನಿಮಾಕ್ಕಾಗಿ ಸಾಕಷ್ಟು ಸಾಲ ಮಾಡಿದ್ದ ಅಜಯ್ ರಾವ್ ಇದರಿಂದ ಕಂಗೆಟ್ಟಿದ್ದರು ಎನ್ನಲಾಗಿದೆ.2003 ರಲ್ಲಿ ಬಿಡುಗಡೆಯಾದ ಎಕ್ಸ್‌ಕ್ಯೂಸ್‌ಮೀ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಅಜಯ್ ರಾವ್, ಇದೇ ವರ್ಷ ಬಿಡುಗಡೆ ಆದ ಯುದ್ಧಕಾಂಡ 2 ಸಿನಿಮಾನಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಸಹ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!