ಉದಯವಾಹಿನಿ,ಇಸ್ಲಾಮಾಬಾದ್‌: ಬಹುನಿರೀಕ್ಷಿತ 2025ರ ಟಿ20 ಏಷ್ಯಾ ಕಪ್ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಚ್ಚರಿ ತಂಡವನ್ನು ಪ್ರಕಟಿಸಿದೆ. ಪಾಕ್‌ ತಂಡದ ಸ್ಟಾರ್‌ ಐಕಾನ್‌ಗಳಾದ ಮೊಹಮ್ಮದ್‌ ರಿಜ್ವಾನ್‌ ಹಾಗೂ ಬಾಬರ್‌ ಆಜಂ ಮತ್ತು ಸ್ಟಾರ್‌ ವೇಗಿ ನಸೀಮ್‌ ಶಾ ಅವರನ್ನ ಹೊರದಬ್ಬಿ ಹೊಸ ಮುಖದ ನಾಯಕತ್ವದಲ್ಲಿ ಹೊಸ ತಂಡವನ್ನು ಪ್ರಕಟಿಸಿದೆ.
ಸಲ್ಮಾನ್ ಅಲಿ ಅಘಾಗೆ ತಂಡದ ನಾಯಕತ್ವದ ಹೊಣೆ ನೀಡಲಾಗಿದೆ. ಉಳಿದಂತೆ ಸ್ಫೋಟಕ ಬ್ಯಾಟರ್‌ ಫಖರ್‌ ಜಮಾನ್‌, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಖುಷ್ದಿಲ್ ಶಾಗೆ ಸ್ಥಾನ ನೀಡಲಾಗಿದೆ. ಜೊತೆ‌ಗೆ ಇದೇ ಟೂರ್ನಿಯಲ್ಲಿ ಮಿಂಚಿದ ಆಫ್‌ ಸ್ಪಿನ್ನರ್‌ ಅಬ್ರಾರ್ ಅಹ್ಮದ್‌‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಏಷ್ಯಾ ಕಪ್‌ಗೆ ಪಾಕ್‌ ತಂಡ : ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್‌ ರೌಫ್‌, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್-ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ನವಾಜ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.

ಯಾವಾಗಿನಿಂದ ಏಷ್ಯಾಕಪ್‌ ಟೂರ್ನಿ
2026ರ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್‌ ಟೂರ್ನಿ ಆಡಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ 9 ರಿಂದ 28ರ ವರೆಗೆ ಯುಎಇನಲ್ಲಿ ಟೂರ್ನಿ ನಡೆಯಲಿದೆ.ಜುಲೈ 24 ರಂದು ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ (Asian Cricket Council) ಟೂರ್ನಿಯ ಸ್ಥಳವನ್ನ ಅಧಿಕೃತಗೊಳಿಸಲಾಯಿತು. ಈ ಬಾರಿ ಟೂರ್ನಿಯ ಹಕ್ಕು ಬಿಸಿಸಿಐನದ್ದೇ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಆಗಿದೆ. ಆದ್ರೆ ಭಾರತ ಮತ್ತು ಪಾಕ್‌ ನಡುವಿನ ಉದ್ವಿಗ್ನತೆಯಿಂದಾಗಿ 2027ರ ವರೆಗೂ ತಟಸ್ಥ ಸ್ಥಳಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಸೆ.9 ರಿಂದ ಸೆ.28ರ ವರೆಗೆ ಟೂರ್ನಿ ನಿಗದಿಯಾಗಿದ್ದು, ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಸೆ.14ರಂದು ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!