ಉದಯವಾಹಿನಿ, ಬೆಂಗಳೂರು: ಜೆಡಿಎಸ್ ಶಾಸಕ ಶರಣುಗೌಡ ಕಂದಕೂರ್ ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ ಎಂಬ ಪೋಸ್ಟರ್‌ ಹಿಡಿದು ಬಂದಿದ್ದಾರೆ. ಸ್ವಾಮಿ ಮಂಜುನಾಥನನ್ನು ರಕ್ಷಿಸಿ, ಅಪಪ್ರಚಾರಿಗಳನ್ನು ಶಿಕ್ಷಿಸಿ, ಸತ್ಯಮೇವ ಜಯತೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಶಾಸಕ, ಅಪಪ್ರಚಾರ ಮಾಡುವವರನ್ನು ಸರ್ಕಾರ ಶಿಕ್ಷಿಸದೇ ಇದ್ದರೇ, ಮಂಜುನಾಥನೇ ಶಿಕ್ಷಿಸುವ ಕಾಲ ಬರಲಿದೆ. ಸರ್ಕಾ ತೊಟ್ಟಿಲು ತೂಗಿ ಮಕ್ಕಳನ್ನು ಚಿವುಟುವ ಕೆಲಸ ಮಾಡಬಾರದು ಎಂದಿದ್ದಾರೆ.

ಎಸ್‌ಐಟಿ ತನಿಖೆ ಎಷ್ಟು ದಿನದಿಂದ ತನಿಖೆ ನಡೆಸುತ್ತಿದೆ. ಇದೆಲ್ಲ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಅಂತ್ಯಹಾಡಬೇಕು. ಪಿತೂರಿಯ ಪಿತಾಮಹರ ವಿರುದ್ಧ ಕ್ರಮ ಆಗ್ಬೇಕು. ಅಪಪ್ರಚಾರ ನಿಲ್ಲಿಸಬೇಕು. ಸೌಜನ್ಯ ಪರವಾಗಿ ನಮ್ಮ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಜೊತೆಗೆ ಈವರೆಗಿನ ತನಿಖಾ ಬೆಳವಣಿಗೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ.

Leave a Reply

Your email address will not be published. Required fields are marked *

error: Content is protected !!