ಉದಯವಾಹಿನಿ, ಜೀ5 ವೆಬ್ ಸರಣಿಗಳಿಗೆ ವೇದಿಕೆ ಸೃಷ್ಟಿಸಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಈಗ ‘ಶೋಧ’ (Shodha) ಹೆಸರಿನ ವೆಬ್ ಸಿರೀಸ್ ರಿಲೀಸ್ ಮಾಡಲು ರೆಡಿ ಆಗಿದೆ. ಈ ಸರಣಿಯ ಟ್ರೇಲರ್‌ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ತಿಂಗಳ 29 ರಿಂದ ಶೋಧ zee5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಈ ಕುರಿತು ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜೀ5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮಲು ಮಾತನಾಡಿ, zee5 ಈ ಮೊದಲು ಒಂದೇ ಒಟಿಟಿ ಫ್ಲಾಟ್‌ಫಾರ್ಮ್ ಆಗಿತ್ತು. ಈಗ ಭಾಷೆಗಾಗಿ ಒಂದು ವಿಶೇಷ ಒಟಿಟಿ ಶುರು ಮಾಡಿದ್ದೇವೆ. Zee5 ಈಗ ಕನ್ನಡ zee5 ಆಗಿದೆ. ಈಗ ಇದರ ಜೊತೆಗೆ ವೆಬ್ ಸಿರೀಸ್ ಶುರು ಮಾಡಿದ್ದೇವೆ. ಇದು zee5 ಮೊದಲ ಪ್ರಯತ್ನ. ಮಿನಿ ಸಿರೀಸ್ ಹಾಗೂ ಮೈಕ್ರೋ ಸಿರೀಸ್ ಎಂಬುದನ್ನು ಶುರು ಮಾಡಿದ್ದೇವೆ. ಮಿನಿ ಮತ್ತು ಮೆಗಾ ಸಿರೀಸ್ ಇದೆ. ಮಿನಿ ಸೀರಿಸ್ ಮೊದಲ ಹೆಜ್ಜೆಯೇ ಅಯ್ಯನ ಮನೆ. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಸಕ್ಸಸ್ ಮುಂದಿನ ಹೆಜ್ಜೆಯೇ ಶೋಧ. ಶೋಧ ಶುರು ಮಾಡಿದಾಗ ಕೆಆರ್ ಜಿಯವರು ಸಾಥ್ ಕೊಟ್ಟರು. ಇದರ ಮುಂದುವರೆದ ಭಾಗವಾಗಿ ಪಿಆರ್‌ಕೆ ಪ್ರೊಡಕ್ಷನ್ ಹಾಗೂ ತರುಣ್ ಸುಧೀರ್ ಪ್ರೊಡಕ್ಷನ್ ಸೇರಿದಂತೆ ಹಲವು ಪ್ರೊಡಕ್ಷನ್ ಜೊತೆ ಕೈ ಜೋಡಿಸಿದ್ದೇವೆ. ಈ ಸಿರೀಸ್ ಪ್ರಪಂಚವೇ ವಿಭಿನ್ನ ಎಂದರು.‌

ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಮಾತನಾಡಿ, ಅಯ್ಯನ ಮನೆ ಸಕ್ಸಸ್ ಬಳಿ ಪ್ರದೀಪ್ ಬಂದು ವೆಬ್ ಸಿರೀಸ್ ಐಡಿ ಇದೆ ಮಾಡೋಣಾ ಎಂದು ಕೇಳಿದರು. ಅದಕ್ಕೆ ಫ್ರೆಶ್ ರೈಟಿಂಗ್ ಬರಬೇಕು. ಸುಹಾಸ್ ಹಿಂದಿಯಲ್ಲಿ ಫರ್ಜಿ ವೆಬ್ ಸಿರೀಸ್, ಫ್ಯಾಮಿಲಿ ಮ್ಯಾನ್ 2, 3 ವೆಬ್ ಸರಣಿಗೆ ರೈಟರ್ ಆಗಿ ಕೆಲಸ ಮಾಡಿದ್ದರು. ಅವರನ್ನು ತಂದೆವು. ಬಳಿಕ ಸುನಿಲ್ ಮೈಸೂರು ಬಂದರು. ಹೀಗೆ ಒಬೊಬ್ಬರೇ ತಂಡ ಸೇರಿಕೊಂಡರು. ತುಂಬಾ ಜನ ಸೇರಿಕೊಂಡು ವೆಬ್ ಸಿರೀಸ್ ಮಾಡಿದ್ದೇವೆ. ಟ್ರೇಲರ್ ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಇದೇ ತಿಂಗಳ 29ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!