ಉದಯವಾಹಿನಿ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್‌ಗೆ ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್‌ನ ಮೊದಲನೇ ಕಂತು ಪ್ರಸಾರವಾಗಲಿದೆ.
ಈ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್ , ಇಷ್ಟು ದಿನ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನಾನು, ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದೇನೆ. ವಿವೇಕ್ ಹಾಗೂ ಮೇಘ ಜಾದವ್ ಎಂಬ ನೂತನ ಪ್ರತಿಭೆಗಳು ಈ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ. ಈ ವೆಬ್ ಸಿರೀಸ್ ಒಂದು ವಿಭಿನ್ನ ಕಥೆ. ಎಂಜಿನಿಯರಿಂಗ್ ಮಾಡಬೇಕಾದರೆ ಬಿ.ಇ ಮಾಡಬೇಕು. ಡಾಕ್ಟರ್ ಆಗಬೇಕೆಂದರೆ ಎಂಬಿಬಿಎಸ್ ಮಾಡಬೇಕು. ಕಾರು ಚಾಲನೆ ಮಾಡಬೇಕಾದರೂ ಸಹ ತರಭೇತಿ ಬೇಕು. ಹೀಗೆ ಎಲ್ಲದ್ದಕ್ಕೂ ಒಂದೊಂದು ರೀತಿ ಇದೆ. ಆದರೆ, ಮದುವೆ ವಿಷಯಕ್ಕೆ ಬಂದಾಗ ಹುಡುಗ-ಹುಡುಗಿಯನ್ನು ಮನೆಯವರು ಮಾತನಾಡಿ ಎಂದು ಹೇಳಿದಾಗ ಏನು ಮಾತನಾಡಬೇಕೆಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ, ನಾನು ಸೈಕಿಯಾರ್ಟಿಸ್ಟ್ ಹಾಗೂ ಮ್ಯಾರೇಜ್ ಕೌನ್ಸಿಲರ್ ಮುಂತಾದವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿ ಕೆಲವು ವಿಷಯಗಳನ್ನು ಸಂಗ್ರಹ ಮಾಡಿ ಈ ವೆಬ್ ಸಿರೀಸ್ ಮೂಲಕ ಜನರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದೇ ಕಥಾವಸ್ತು. ಇದರ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಸಹ ಇರಲಿದೆ.

Leave a Reply

Your email address will not be published. Required fields are marked *

error: Content is protected !!