ಉದಯವಾಹಿನಿ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚಿನ ಹಣವನ್ನು ಪಡೆದ ಹಲವು ಆಟಗಾರರು ಒಂದು ದಿನದ ಬೆನ್ನಲ್ಲೆ ತಮ್ಮ ಪ್ರದರ್ಶನಗಳಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಮಿನಿ ಹರಾಜಿನಲ್ಲಿ 25.20 ಕೋಟಿ ರು. ಗಳಿಗೆ ಕೋಲ್ಕತಾ ನೈಟ್ ರೈಡರ್ಸ್‌ಗೆ ಸೇರಿದ್ದ ಆಸೀಸ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಅವರು ಇಂಗ್ಲೆಂಡ್ ವಿರುದ್ಧ ಆಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಡಕ್‌ಔಟ್ ಆಗಿದ್ದಾರೆ. ಅವರು ಆಡಿದ ಕೇವಲ ಎರಡನೇ ಎಸೆತದಲ್ಲಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.
ಮಿನಿ ಹರಾಜಿನಲ್ಲಿ ಕ್ಯಾಮೆರಾನ್ ಗ್ರೀನ್ ಪ್ರಮುಖ ಕೇಂದ್ರ ಬಿಂದುವಾಗಿದ್ದರು. ಇವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಭಾರಿ ಪೈಪೋಟಿಯನ್ನು ನಡೆಸಿದ್ದವು. ಆದರೆ, ಅಂತಿಮವಾಗಿ ಕೋಲ್ಕತಾ ಫ್ರಾಂಚೈಸಿ ದಾಖಲೆಯ ಮೊತ್ತಕ್ಕೆ ಆಸೀಸ್ ಆಲ್‌ರೌಂಡರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆದರೆ, ದುಬಾರಿ ಮೊತ್ತವನ್ನು ಜೇಬಿಗಿಳಸಿಕೊಂಡ ಒಂದು ದಿನದ ಬೆನ್ನಲ್ಲೆ ಆಸೀಸ್ ಆಲ್‌ರೌಂಡರ್ ಕೋಲ್ಕತಾ ಫ್ರಾಂಚೈಸಿಗೆ ನಿರಾಶೆ ಮೂಡಿಸಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ ಗ್ರೀನ್ ಕೇವಲ ಎರಡೇ ಎರಡು ಎಸೆತಗಳಲ್ಲಿ ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಆ ಮೂಲಕ ಕೋಲ್ಕತಾ ಫ್ರಾಂಚೈಸಿಗೆ ನಿರಾಶೆ ಮೂಡಿಸಿದ್ದಾರೆ.
