ಉದಯವಾಹಿನಿ, ಸ್ಯಾಂಡಲ್ವುಡ್ ನಿರ್ದೇಶಕ ನಂದ ಕಿಶೋರ್ ಅವರು ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಕೊಚ್ಚಿಯಲ್ಲಿ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣದಲ್ಲಿರುವ ಮೋಹನ್ ಲಾಲ್, ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ ಮತ್ತು ನಯನ್ ಸಾರಿಕಾ, ನಿರ್ದೇಶಕ ನಂದ ಕಿಶೋರ್ ಉಪಸ್ಥಿತರಿದ್ದರು. ನಿರ್ಮಾಪಕರಾದ ವರುಣ್ ಮಾಥುರ್, ಅಭಿಷೇಕ್ ಎಸ್. ವ್ಯಾಸ್ ಮತ್ತು ಸಂಜಯ್ ದ್ವಿವೇದಿ ಕೂಡ ಭಾಗಿಯಾಗಿದ್ದರು.
ವೃಷಭ ಚಿತ್ರವು ಪ್ರೀತಿ, ವಿಧಿ ಮತ್ತು ತ್ಯಾಗದ ಕಥೆಯಾಗಿದೆ. ಮೋಹನ್ ಲಾಲ್ ಡಬ್ಬಲ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಅವರು ರಾಜ ವಿಜಯೇಂದ್ರ ವೃಷಭನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ, ಅವರು ಯಶಸ್ವಿ ಉದ್ಯಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಮರ್ಜಿತ್ ಲಂಕೇಶ್ ಅವರ ಮಗನಾಗಿ ನಟಿಸಿದ್ದಾರೆ. ತನ್ನ ತಂದೆಯನ್ನು ರಕ್ಷಿಸಲು ವಿಧಿ ಮತ್ತು ಭಯದೊಂದಿಗೆ ಸಮರ್ಜಿತ್ ಹೋರಾಡುತ್ತಾರೆ. ಟ್ರೇಲರ್ ಹೈ- ಆಕ್ಷನ್ ಅಂಶಗಳಿಂದ ಕೂಡಿದೆ. ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ಗರುಡ ರಾಮ್ನಲ್ಲಿ ಟ್ರೇಲರ್‌ನಲ್ಲಿ ಅಬ್ಬರಿಸಿದ್ದಾರೆ.

ನಿರ್ಮಾಪಕಿ ಏಕ್ತಾ ಆರ್. ಕಪೂರ್ ಮಾತನಾಡಿ, ವೃಷಭ ನಮಗೆ ಕೇವಲ ಒಂದು ಚಿತ್ರಕ್ಕಿಂತ ಹೆಚ್ಚಿನದು. ಇದು ಪ್ಯಾನ್-ಇಂಡಿಯನ್ ಪ್ರಯಾಣದಲ್ಲಿ ಬಹಳ ವಿಶೇಷವಾದ ಮೈಲಿಗಲ್ಲು. ಈ ಅದ್ಭುತ ಅವಕಾಶವನ್ನು ನಮಗೆ ನೀಡಿದ್ದಕ್ಕಾಗಿ ಮೋಹನ್ ಲಾಲ್ ಸರ್ ಅವರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಂದ ಕಿಶೋರ್ ಅವರ ದೃಷ್ಟಿಕೋನದಡಿಯಲ್ಲಿ, ಅಂತಹ ಬದ್ಧತೆಯ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದು ನಿಜವಾಗಿಯೂ ಪ್ರತಿಫಲದಾಯಕವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!