ಉದಯವಾಹಿನಿ,ಡಯಟ್ ಟಿಪ್ಸ್: ಇಡೀ ದಿನ ದೇಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಅದಕ್ಕೆ ತಕ್ಕ ಹಾಗೆ ಪ್ರೋಟೀನ್ ಅಂಶಗಳು ದೊರೆಯಬೇಕು. ಇದಕ್ಕಾಗಿ ಕಡಲೆಕಾಯಿ, ಮೊಸರು, ಬಾದಾಮಿಯಂತಹ ಪ್ರೋಟೀನ್ಯುಕ್ತ ಆಹಾರವನ್ನು ಸೇವಿಸಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಅಲ್ಲದೆ ಚಳಿಗಾಲವೂ ಬಿಟ್ಟು ಬಿಡದೆ ಕಾಡುತ್ತಿದೆ. ಹೀಗಾಗಿ ದೇಹಕ್ಕೆ ಸರಿಯಾದ ಪೋಷಕಾಂಶಗಳನ್ನು ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ಆಹಾರದ ಆಯ್ಕೆಯಲ್ಲಿ ಎಚ್ಚರವಿರಲಿ. ಅವುಗಳು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವಂತಿರಬೇಕು ಆಗ ಮಾತ್ರ ಸೇವಿಸುವ ಆಹಾರ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ. 2022 ಆರಂಭದಲ್ಲಿದ್ದೇವೆ. ಈಗಲೇ ಒಂದಷ್ಟು ಹೊಸ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳಿ ಇದು ನಿಮ್ಮ ದೇಹವನ್ನು ಫಿಟ್ ಅಗಿಯೂ ಇಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಈ ಪೋಷಕಾಂಶಗಳನ್ನು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ.
1. ಪ್ರೋಟೀನ್ಇಡೀ ದಿನ ದೇಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಅದಕ್ಕೆ ತಕ್ಕ ಹಾಗೆ ಪ್ರೋಟೀನ್ ಅಂಶಗಳು ದೊರೆಯಬೇಕು. ಇದಕ್ಕಾಗಿ ಕಡಲೆಕಾಯಿ, ಮೊಸರು, ಬಾದಾಮಿಯಂತಹ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಿ. ಪ್ರತಿದಿನ 1 ಗ್ರಾಮ್ನಷ್ಟು ಪ್ರೋಟಿನ್ಭರಿತ ಆಹಾರವನ್ನು ಸೇವಿನೆ ದೇಹದಲ್ಲಿರುವ ಮಾಂಸಖಂಡಗಳನ್ನು ಬಲಪಡಿಸುತ್ತವೆ. ಇದರ ಜತೆಗೆ ಡೈರಿ ಉತ್ಪನ್ನಗಳಾದ ಹಾಲು, ಮೊಸರಿನ ಸೇವನೆಯೂ ಪ್ರತಿದಿನ ನಿಮ್ಮ ಡಯೆಟ್ ಆಹಾರದಲ್ಲಿರಲಿ.
2. ಒಮೆಗಾ 3 ಆಹಾರಗಳು ಮೀನು, ಏಡಿ ಸೇರಿದಂತೆ ಸಮುದ್ರ ಆಹಾರಗಳಲ್ಲಿ ಒಮೆಗಾ3 ಅಂಶ ಯಥೇಚ್ಛವಾಗಿರುತ್ತವೆ. ಇದು ನಿಮ್ಮ ದೇಹದಲ್ಲಿ ಶಕ್ತಿಯ ವರ್ಧನೆಗೆ ಸಹಾಯ ಮಾಡುತ್ತದೆ ಜತೆಗೆ ನಿಮ್ಮ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ. ಇನ್ನು ಸಸ್ಯಾಹಾರಿಗಳಿಗೆ ಕಡಲೆಕಾಯಿ, ಡ್ರೈಫ್ರೂಟ್ಸ್ ಹಾಗೂ ತರಕಾರಿಗಳಲ್ಲಿ ಹೆಚ್ಚು ಒಮೆಗಾ 3 ಅಂಶಗಳು ಸಿಗುತ್ತವೆ. ಆದ್ದರಿಂದ ಒಮೆಗಾ 3 ಅಂಶದ ಆಹಾರಗಳು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿರಲಿ.
3. ಕ್ಯಾಲ್ಸಿಯಂ ಕ್ಯಾಲ್ಸಿಯಂ ನಿಮ್ಮ ದೇಹದಲ್ಲಿನ ಮೂಳೆಗಳ ಬಲವರ್ಧನೆಗೆ ಸಹಾಯಕವಾಗಿದೆ. ಹಲ್ಲುಗಳ ಆರೋಗ್ಯಕ್ಕೂ ಕ್ಯಾಲ್ಸಿಯಂ ಅತೀ ಅಗತ್ಯವಾಗಿದೆ. ಹೀಗಾಗಿ ನೀವು ಹಾಲು, ಮೊಸರು, ಚೀಸ್, ಬೀನ್ಸ್ನಂತಹ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿ.
4. ವಿಟಮಿನ್ ಡಿ ವಿಟಮಿನ್ ಡಿ ಅಂಶವು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೂರ್ಯನ ಎಳೆಕಿರಣಗಳಿಂದ ಸುಲಭವಾಗಿ ಸಿಗುವ ವಿಟಮಿನ್ ಡಿ ದೇಹವನ್ನು ಬೆಚ್ಚಗಿರಿಸಿ ಚಯಾಪಯಗಳನ್ನು ಸುಗಮಗೊಳಿಸುತ್ತದೆ. ಸೂರ್ಯನ ಕಿರಣಗಳಿಂದ ಮಾತ್ರವಲ್ಲ, ಅಡುಗೆಯಲ್ಲಿ ಬಳಸುವ ಎಣ್ಣೆ, ಮೊಟ್ಟೆ, ಕಿತ್ತಳೆ ಹಣ್ಣುಗಳಿಂದಲೂ ವಿಟಮಿನ್ ಡಿ ಅಂಶ ನಿಮಗೆ ದೊರೆಯುತ್ತದೆ.
