ಉದಯವಾಹಿನಿ, ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾದಲ್ಲಿ ಬುಧವಾರ ಬೆಳಗಿನ ಜಾವ 3.3 ಹಾಗೂ 4.0 ತೀವ್ರತೆಯಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮೇಘಸ್ಫೋಟ ಸಂಭವಿಸುತ್ತಿದೆ. ಇದೀಗ ಅದರ ನಡುವೆಯೇ ಹಿಮಾಚಲ ಪ್ರದೇಶದ ಚಂಬಾದಲ್ಲಿ ಎರಡು ಭಾರಿ ಭೂಕಂಪನ ಉಂಟಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರದ ಮಾಹಿತಿ ಪ್ರಕಾರ, ಬುಧವಾರ ಬೆಳಗಿನ ಜಾವ 3:27ರ ಸುಮಾರಿಗೆ 3.3 ತೀವ್ರತೆ ಭೂಕಂಪನ ಸಂಭವಿಸಿದೆ. ಅದಾದ ಒಂದು ಗಂಟೆಯ ಬಳಿಕ 4:39ರ ಸುಮಾರಿಗೆ 4.0 ತ್ರೀವತೆಯಲ್ಲಿ ಭೂಮಿ ಕಂಪಿಸಿದೆ.ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದ್ದು, ಕುಲ್ಲು ಜಿಲ್ಲೆಯ ಲಘಟಿ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟವು ತೀವ್ರ ವಿನಾಶಕ್ಕೆ ಕಾರಣವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಜೂ.20ರಿಂದ ಉಂಟಾದ ಮಳೆ ಸಂಬಂಧಿತ ಅವಘಡದಲ್ಲಿ 270ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 143 ಜನರು ಭೂಕುಸಿತ, ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟಗಳಿಂದ ಸಾವನ್ನಪ್ಪಿದ್ದರೆ, 133 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!