ಉದಯವಾಹಿನಿ, ನವದೆಹಲಿ: ವಿಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಮುಂಗಾರು ಅಧಿವೇಶನ (Monsoon Session) ಅಂತ್ಯಗೊಂಡಿದ್ದು, ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.ಅಧಿವೇಶನದ ಕೊನೆಯ ದಿನವಾದ ಇಂದು ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ಕುರಿತು ವಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೇ ಸ್ಪೀಕರ್ ಅವರು ಮಧ್ಯಾಹ್ನ 12 ಗಂಟೆವರೆಗೆ ಕಲಾಪ ಮುಂದೂಡಿದ್ದರು. ನಂತರ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದರು. ಈ ಮೂಲಕ ಕಲಾಪಕ್ಕೆ ಅಡ್ಡಿಪಡಿಸುವವರಿಗೆ ಸ್ಪೀಕರ ಓಂ ಬಿರ್ಲಾ ತಕ್ಕ ಪಾಠ ಕಲಿಸಿದರು.
ಗದ್ದಲ, ವಿಪಕ್ಷಗಳ ಪ್ರತಿಭಟನೆ ನಡುವೆಯೇ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು. ಲೋಕಸಭೆಯಲ್ಲಿ 14 ಮಸೂದೆಗಳು ಮಂಡನೆಯಾಗಿದ್ದು, ಈ ಪೈಕಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
2 ಮಸೂದೆಗಳ ಅಂಗೀಕಾರ: ಸ್ಪೀಕರ್
ಅಧಿವೇಶನದ ವಿವರ ಮಂಡಿಸಿದ ಸ್ಪೀಕರ್ ಓಂ ಬಿರ್ಲಾ, ಒಟ್ಟು 14 ಸರ್ಕಾರಿ ಮಸೂದೆಗಳನ್ನ ಮಂಡಿಸಲಾಗಿದ್ದು, ಅವುಗಳಲ್ಲಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಜುಲೈ 28 ಮತ್ತು 29 ರಂದು ವಿಶೇಷ ಚರ್ಚೆಗಳು ನಡೆದವು, ಇದು ಪ್ರಧಾನ ಮಂತ್ರಿಯವರ ಉತ್ತರದೊಂದಿಗೆ ಮುಕ್ತಾಯವಾಯಿತು. ಆಗಸ್ಟ್ 18ರಂದು ಬಾಹ್ಯಾಕಾಶ ಕಾರ್ಯಕ್ರಮದ ಸಾಧನೆಗಳ ಕುರಿತು ವಿಶೇಷ ಚರ್ಚೆಯನ್ನೂ ಸಹ ನಡೆಸಲಾಯಿತು ಎಂದು ತಿಳಿಸಿದರು.
