ಉದಯವಾಹಿನಿ, ನವದೆಹಲಿ: ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪಾರಿವಾಳವನ್ನು ಭದ್ರತಾ ಪಡೆಗಳು ಸೆರೆಹಿಡಿದಿದ್ದಾರೆ.ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಚೀಟಿಯನ್ನು ಪಾರಿವಾಳ ಉಗುರುಗಳಿಗೆ ಕಟ್ಟಲಾಗಿತ್ತು. ಪತ್ರದಲ್ಲಿ ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶವಿತ್ತು ಎಂದು ತಿಳಿಸಿದ್ದಾರೆ.ಪಾಕಿಸ್ತಾನವು ಭಾರತ ಗಡಿಭಾಗಕ್ಕೆ ವಿವಿಧ ಸಂದೇಶಗಳನ್ನು ಹೊತ್ತ ಬಲೂನ್, ಧ್ವಜಗಳು ಮತ್ತು ಪಾರಿವಾಳಗಳನ್ನು ಕಳುಹಿಸುತ್ತಿದೆ. ಆದರೆ ಬೆದರಿಕೆ ಪತ್ರವನ್ನು ಹೊತ್ತ ಪಾರಿವಾಳವನ್ನು ಸೆರೆಹಿಡಿಯುತ್ತಿರುವುದು ಇದೇ ಮೊದಲು ಎಂದಿದ್ದಾರೆ. ಹೀಗಾಗಿ ಭದ್ರತಾ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿವೆ.ಆ.18ರಂದು ಪಾಕಿಸ್ತಾನದಿಂದ ಬರುತ್ತಿದ್ದ ಪಾರಿವಾಳವನ್ನು ಅಂತಾರಾಷ್ಟ್ರೀಯ ಗಡಿಯ ಕಟ್ಮರಿಯಾ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!