ಉದಯವಾಹಿನಿ, ಚಾಮರಾಜನಗರ: ಪ್ರೀತ್ಸೆ ಪ್ರೀತ್ಸೆ ಎಂದು ವಿದ್ಯಾರ್ಥಿನಿಯ ಹಿಂದೆ ಬಿದ್ದು, ಕೊಲೆ ಬೆದರಿಕೆ ಹಾಕಿದ್ದ ಪಾಗಲ್ ಪ್ರೇಮಿಯನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಆಯೂಬ್ ಖಾನ್ ಬಂಧಿತ ಆರೋಪಿ. ಗುಂಡ್ಲುಪೇಟೆಯಿಂದ ಮೈಸೂರು ಖಾಸಗಿ ಕಾಲೇಜಿಗೆ ಸೇರಿದ್ದ ವಿದ್ಯಾರ್ಥಿನಿಯ ಬಳಿ ಆರೋಪಿ, ನಿನ್ನ ಸ್ನೇಹಿತೆಯ ಸಹೋದರನೆಂದು ಸುಳ್ಳು ಹೇಳಿ ಆಕೆಗೆ ಗಾಳ ಹಾಕಿದ್ದ. ನೀನು ಕೂಡ ನನ್ನ ಮುದ್ದು ತಂಗಿ ಎಂದು ಆಯೂಬ್ ಪರಿಚಯ ಮಾಡಿಕೊಂಡಿದ್ದ. ಆತನ ಮೊದಲು ಹಿಂದು ಧರ್ಮದವನೆಂದು ವಿದ್ಯಾರ್ಥಿನಿ ಬಳಿ ಸುಳ್ಳು ಹೇಳಿದ್ದ ಎಂದು ತಿಳಿದುಬಂದಿದೆ.
ಆಯೂಬ್ ಖಾನ್ ಹಿಂದೂ ಎಂದು ಹೇಳಿರುವುದು ಸುಳ್ಳೆಂದು ತಿಳಿದ ವಿದ್ಯಾರ್ಥಿನಿ ಆತನಿಂದ ದೂರವಾಗಿದ್ದಳು. ಆದರೆ ಆಯೂಬ್ ಮಾತ್ರ ನೀನಂದ್ರೆ ನಂಗೆ ಇಷ್ಟ. ನನ್ನನ್ನ ಮಾತನಾಡಿಸು ಎಂದು ಆಕೆಯನ್ನು ಪೀಡಿಸುತ್ತಿದ್ದ. ಅಲ್ಲದೇ ಅವಾಚ್ಯ ಶಬ್ಧಗಳಿಂದ ಆಕೆಯನ್ನು ನಿಂದಿಸಿ, ಕೊಲೆ ಮಾಡುವ ಬೆದರಿಕೆ ಹಾಕಿದ್ದ.
