ಉದಯವಾಹಿನಿ, ಮಂಗಳೂರು: ಧರ್ಮಸ್ಥಳ ದೇವಸ್ಥಾನದ ವಿರುದ್ಧ ಎಐ ವಿಡಿಯೋ ಮಾಡಿ ಕಲರ್ ಕಲರ್ ಕಾಗೆ ಹಾರಿಸಿದ್ದ ಯೂಟ್ಯೂಬರ್ ಸಮೀರ್ ಕೊನೆಗೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವೇಳೆಗೆ ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್ ವಕೀಲರೊಂದಿಗೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಹಾಜರಾಗಿದ್ದಾನೆ. ಕೂಲಿಂಗ್ ಗ್ಲಾಸ್ ಧರಿಸಿದ್ದ ಸಮೀರ್ ಮುಗುಳು ನಗೆ ಬೀರುತ್ತಲೇ ವಿಚಾರಣೆಗೆ ಹಾಜರಾಗಿದ್ದಾನೆ. ಇನ್ನೂ ಸಕಲ ತಯಾರಿ ಮಾಡಿಕೊಂಡಿದ್ದ ಎಸ್‌ಐಟಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್ ವಾಹಿನಿಯ ಸಮೀರ್‌ಗೆ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಕೋರ್ಟ್ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು.
