ಉದಯವಾಹಿನಿ, ಚಿಕ್ಕೋಡಿ: `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ ಅಂತ ಸೆಪ್ಟೆಂಬರ್ 8 ರಂದು ದೇವರನ್ನ ನೋಡಲು 21 ಭಕ್ತರು ದೇಹತ್ಯಾಗ ಮಾಡಲು ಹೊರಟಿದ್ದ ಭಕ್ತಿಯ ಪರಕಾಷ್ಠೆಯ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ.
ಸೆಪ್ಟೆಂಬರ್ 08 ರಂದು ಪ್ರಾಣತ್ಯಾಗ ಮಾಡೋದಕ್ಕೆ 10ಕ್ಕೂ ಹೆಚ್ಚು ಭಕ್ತರು (Devotees) ಮುಂದಾಗಿದ್ದದ್ದು ಆಧುನಿಕ ಯುಗದಲ್ಲಿ ಮೂಢನಂಬಿಕೆ ಪದ್ಧತಿ ಇನ್ನು ಜೀವಂತವಾಗಿದಿಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಅನಂತಪುರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ 10ಕ್ಕೂ ಹೆಚ್ಚು ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಹರಿಯಾಣದ ವಿವಾದತ್ಮಕ ಸಂತ ರಾಮಪಾಲ ಅನುಯಾಯಿಗಳು ದೇಹತ್ಯಾಗ ಮಾಡಲು ಮುಂದಾಗಿದ್ದಾರೆ.
