
ಉದಯವಾಹಿನಿ, ಮಂಗಳೂರು: ಅನಾಮಿಕನ ಪಾಪ ಪ್ರಜ್ಞೆಯ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. 12 ದಿನ, 260 ಸಿಬ್ಬಂದಿ, 17 ಪಾಯಿಂಟ್, 25 ಗುಂಡಿ, 52 ದಿನಗಳ ಬಳಿಕ ವಿಶೇಷ ತನಿಖಾ ತಂಡ ಮಾಸ್ಕ್ ಮ್ಯಾನ್‌ನ ಮುಖವಾಡ ಕಳಚಿದೆ. ಬಳಿಕ 10 ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ ಎಸ್‌ಐಟಿ (SIT) ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ.ಆರೋಪಿ ಚಿನ್ನಯ್ಯ, ಆರಂಭದಲ್ಲಿ 2 ಲಕ್ಷ ರೂ. ಹಣ ಪಡೆದು ಡ್ರಾಮಾ ಶುರು ಮಾಡಿದ್ದ. 2023 ಡಿಸೆಂಬರ್‌ನಲ್ಲಿ ಗ್ಯಾಂಗ್ ಒಂದು ಚಿನ್ನಯ್ಯನನ್ನ ಸಂಪರ್ಕ ಮಾಡಿತ್ತು. ಈ ವೇಳೆ ಅಕ್ರಮವಾಗಿ ಶವಗಳನ್ನ ಹೂತಿಟ್ಟಿರುವ ಬಗ್ಗೆ ತಪ್ಪು ಒಪ್ಪಿಗೆ ಕೊಡುವಂತೆ ಆ ಗ್ಯಾಂಗ್‌ನೊಂದಿಗೆ ಚಿನ್ನಯ್ಯ ಡೀಲ್ ಮಾಡಿಕೊಂಡಿದ್ದ ಇದೀಗ ಅಪಪ್ರಚಾರ ಮಾಡುವ ಗ್ಯಾಂಗ್‌ನಲ್ಲಿ ಯಾರಿದ್ರು ಅನ್ನೋದರ ಬಗ್ಗೆ ವಿಚಾರಣೆ ವೇಳೆ ಚಿನ್ನಯ್ಯ ಬಾಯ್ಚಿಟ್ಟಿದ್ದಾನೆ. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹೆಸರನ್ನು ಚಿನ್ನಯ್ಯ ಕಕ್ಕಿದ್ದಾನೆ.
