ಉದಯವಾಹಿನಿ, ವಿಶ್ವದ ಎರಡನೇ ಅತಿದೊಡ್ಡ ವಜ್ರ ಪತ್ತೆಯಾಗಿದೆ. ಈ ಅಪರೂಪದ, ಬೃಹತ್ ವಜ್ರವು ಆಫ್ರಿಕಾದ ಅತ್ಯಂತ ವಜ್ರ-ಸಮೃದ್ಧ ಪ್ರದೇಶಗಳಲ್ಲಿ ಒಂದಾದ ಬೋಟ್ಸ್ವಾನಾದ ಕರೋವ್ ವಜ್ರದ ಗಣಿಯಲ್ಲಿ ಕಂಡುಬಂದಿದೆ.
ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಂಡುಹಿಡಿದಿದೆ. ಇದು ರತ್ನ-ಗುಣಮಟ್ಟದ ವಜ್ರವಾಗಿದೆ. ಕುಲ್ಲಿನಾನ್ ವಜ್ರದ (Cullinan Diamond) ನಂತರ ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರವಾಗಿದೆ.
ಎಷ್ಟು ಕ್ಯಾರೆಟ್ ಇದೆ? : ಈ ವಜ್ರವು 2,492 ಕ್ಯಾರೆಟ್ ತೂಗುತ್ತದೆ. ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರವಾಗಿದೆ. ಆಗಸ್ಟ್ 2024 ರಲ್ಲಿ ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಾರ್ಪ್ ಇದನ್ನು ಪತ್ತೆ ಹಚ್ಚಿದೆ. ವಿಶ್ವದ ಅತಿದೊಡ್ಡ ವಜ್ರವೆಂದರೆ ಕುಲ್ಲಿನಾನ್ ವಜ್ರ. ಅದು 3,106 ಕ್ಯಾರೆಟ್ ತೂಗುತ್ತದೆ. 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಹಚ್ಚಲಾಗಿದೆ.
ಭವಿಷ್ಯದಲ್ಲಿ ಇದು ಲಕ್ಷಾಂತರ ಡಾಲರ್‌ಗಳಿಗೆ ಮಾರಾಟವಾಗುವ ನಿರೀಕ್ಷೆಯಿದೆ. ವಜ್ರ ರಫ್ತುಗಳು ಬೋಟ್ಸ್ವಾನಾದ ಆರ್ಥಿಕತೆಗೆ ಶೇಕಡಾ 80 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ. ಸದ್ಯ ಸಿಕ್ಕಿರುವ ವಜ್ರವನ್ನು ಸಂಸ್ಕರಣೆಗಾಗಿ ಕಳುಹಿಸಲಾಗಿದೆ. ಅಲ್ಲಿ ಅದನ್ನು ತುಂಬಾ ಚಿಕ್ಕದಾದ, ಆದರೆ ಬಹಳ ಬೆಲೆಬಾಳುವ ವಜ್ರಗಳಾಗಿ ಕತ್ತರಿಸಲಾಗುತ್ತದೆ.
