ಉದಯವಾಹಿನಿ, ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಮ್ಯಾನ್ಮಾರ್ ಸೇನೆಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಂಚನೆ ಗುಂಪಿಗೆ ತನ್ನ ಗೆಳೆಯನನ್ನು ಮಾರಿದ ಯುವತಿಯನ್ನು ಚೀನೀ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 12 ಲಕ್ಷ ರೂಪಾಯಿಗೆ ತನ್ನ 19 ವರ್ಷದ ಗೆಳೆಯನನ್ನು ಮಾರಿದ 17 ವರ್ಷದ ಯುವತಿಯನ್ನು ಬಂಧಿಸಲಾಗಿದೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಕಳೆದ ಜೂನ್ ಅಂತ್ಯದಲ್ಲಿ ಕುಟುಂಬವು 43 ಲಕ್ಷ ರೂಪಾಯಿಗಳನ್ನು ನೀಡಿದ ನಂತರ ಯುವಕನನ್ನು ಬಿಡುಗಡೆ ಮಾಡಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.ಹುವಾಂಗ್ ಎಂಬ ಚೀನೀ ಯುವಕನಿಗೆ ಈ ಭಯಾನಕ ಅನುಭವ ಆಗಿದೆ. ಸುಮಾರು ನಾಲ್ಕು ತಿಂಗಳುಗಳ ಕಾಲ ಮ್ಯಾನ್ಮಾರ್‌ನಲ್ಲಿರುವ ವಂಚನೆ ಗುಂಪಿನ ಸೆರೆಯಲ್ಲಿದ್ದ ಹುವಾಂಗ್‌ನನ್ನು ನಿರಂತರವಾಗಿ ಥಳಿಸಲಾಗುತ್ತಿತ್ತು ಮತ್ತು ಇದರಿಂದಾಗಿ ಅವನಿಗೆ ಕಿವುಡುತನ ಉಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹುವಾಂಗ್‌ನ ಸಹೋದರಿ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಈ ವಿಷಯ ಚೀನೀ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯಾಯಿತು ಎಂದು ಕ್ಸಿಯಾವೊಕ್ಸಿಯಾಂಗ್ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. 17 ವರ್ಷದ ಶೌ ಎಂಬಾಕೆಯ ಭೇಟಿ,
ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌನಲ್ಲಿರುವ ಬಿಲಿಯರ್ಡ್ಸ್ ಹಾಲ್‌ನಲ್ಲಿ ಹುವಾಂಗ್ 17 ವರ್ಷದ ಶೌ ಎಂಬ ಹುಡುಗಿಯನ್ನು ಮೊದಲ ಬಾರಿಗೆ ಭೇಟಿಯಾಗುತ್ತಾನೆ. ನಂತರ ಇಬ್ಬರೂ ಪ್ರೀತಿಸುತ್ತಿದ್ದರು. ಆಗ್ನೇಯ ಫುಜಿಯಾನ್ ಪ್ರಾಂತ್ಯದವಳು ಎಂದೂ ತನ್ನ ಪೋಷಕರು ದೇಶಾದ್ಯಂತ ಹೂಡಿಕೆಗಳನ್ನು ಹೊಂದಿದ್ದಾರೆ ಎಂದೂ ಶೌ ಹುವಾಂಗ್‌ಗೆ ಹೇಳಿದ್ದಳು.
